ಸಂಸ್ಕೃತ ಪಂಡಿತ ಎಚ್.ವಿ.ನರಸಿಂಹಮೂರ್ತಿ ನಿಧನ

Update: 2018-06-17 18:50 GMT

ಬೆಂಗಳೂರು, ಜೂ.17: ಬಹುಭಾಷಾ ವಿದ್ವಾಂಸ ಹಾಗೂ ಸಂಸ್ಕೃತ ಪಂಡಿತ ಡಾ. ಎಚ್.ವಿ.ನರಸಿಂಹ ಮೂರ್ತಿ ನಿಧನರಾಗಿದ್ದಾರೆ.
ಕನ್ನಡ ಮತ್ತು ಸಂಸ್ಕೃತ ಭಾಷೆಯಲ್ಲಿ ಹಲವಾರು ಪುಸ್ತಕಗಳನ್ನು ಬರೆದಿರುವ ನರಸಿಂಹಮೂರ್ತಿ ಅವರು ರವಿವಾರ ಬೆಳಗಿನ ಜಾವ ಬೆಂಗಳೂರಿನಲ್ಲಿರುವ ಅವರ ಮಗನ ನಿವಾಸದಲ್ಲಿ ಕೊನೆಯುಸಿರೆಳೆದರು. ಅವರ ಮೃತದೇಹವನ್ನು ಕುಂದಾಪುರದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

‘ಕನ್ನಡ- ಕರ್ನಾಟಕ ರಸಪ್ರಶ್ನೆಗಳು’ ಎಂಬ ಅವರ ಕೊನೆ ಪುಸ್ತಕ ಕಂಬದಕೋಣೆಯಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೆಳನದಲ್ಲಿ ಬಿಡುಗಡೆಯಾಗಿತ್ತು. ಚಿಕ್ಕಮಗಳೂರು ಜಿಲ್ಲೆಯ ತೋಟದೂರು ಗ್ರಾಮದ ಮಾವಿನಕುಡಿಗೆ ಎಂಬಲಿ ಜನಿಸಿದ್ದ ನರಸಿಂಹಮೂರ್ತಿ ಅವರು ಕನ್ನಡ ಮತ್ತು ಸಂಸ್ಕೃತ ಭಾಷೆಯಲ್ಲಿ 70ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಇವರ ನೂರಾರು ಲೇಖನಗಳು ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಜಿಲ್ಲಾ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರಾಗಿದ್ದ ಇವರು ಕುಂದಾಪುರ ಭಾಗದಲ್ಲಿ ಧಾರ್ಮಿಕ, ಸಾಹಿತ್ಯಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News