ನಾಗಾ ಉಗ್ರರ ದಾಳಿ: ನಾಲ್ವರು ಯೋಧರ ಹತ್ಯೆ

Update: 2018-06-18 03:42 GMT

ಗುವಾಹತಿ, ಜೂ.18: ಶಂಕಿತ ನ್ಯಾಷನಲ್ ಸೋಶಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ (ಖಪ್ಲಂಗ್) ಬಂಡುಕೋರರು ನಾಗಾಲ್ಯಾಂಡ್‌ನ ಮಾನ್ ಜಿಲ್ಲೆಯಲ್ಲಿ ರವಿವಾರ ನಡೆಸಿದ ದಾಳಿಯಲ್ಲಿ ನಾಲ್ವರು ಅಸ್ಸಾಂ ರೈಫಲ್ಸ್ ಯೋಧರು ಬಲಿಯಾಗಿದ್ದಾರೆ. ಘಟನೆಯಲ್ಲಿ ಇತರ ಆರು ಮಂದಿ ಗಾಯಗೊಂಡಿದ್ದಾರೆ.

ಪಕ್ಕದ ನದಿಯಿಂದ ನೀರು ತರಲು ಯೋಧರು ವಾಹನದಲ್ಲಿ ತೆರಳುತ್ತಿದ್ದಾಗ ವಾಹನದ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಗ್ರೆನೇಡ್ ಹಾಗೂ ಬಂದೂಕಿನ ಮೂಲಕ ಅಭೋಯ್ ಎಂಬಲ್ಲಿ ದಾಳಿ ನಡೆಸಿದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಕೇಂದ್ರ ಸರ್ಕಾರ ಮತ್ತು ನಾಗಾ ಬಂಡುಕೋರ ಗುಂಪುಗಳ ನಡುವಿನ ಮಾತುಕತೆ ಫಲಪ್ರದವಾಗುವ ಹಂತಕ್ಕೆ ಬಂದಿರುವ ಬೆನ್ನಲ್ಲೇ ಈ ದಾಳಿ ನಡೆದಿರುವುದು ಆತಂಕ ಮೂಡಿಸಿದೆ. ಮೂರು ವರ್ಷಗಳ ಹಿಂದೆ ಇದೇ ಜಿಲ್ಲೆಯಲ್ಲಿ ಎನ್‌ಎಸ್‌ಸಿಎನ್(ಕೆ) ಬಂಡುಕೋರರು ನಡೆಸಿದ ಇಂಥದ್ದೇ ದಾಳಿಯಲ್ಲಿ ಅಸ್ಸಾಂ ರೈಫಲ್ಸ್‌ನ ಎಂಟು ಯೋಧರು ಹತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News