ಮರು ಪರೀಕ್ಷೆ ನಡೆಸುವುದಿಲ್ಲ: ವಿಟಿಯು ಸ್ಪಷ್ಟನೆ

Update: 2018-06-19 13:41 GMT

ಬೆಂಗಳೂರು, ಜೂ.19: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (ವಿಟಿಯು) ಇತ್ತೀಚೆಗೆ ನಡೆಸಿದ್ದ ಪರೀಕ್ಷೆ ವೇಳೆ ಪ್ರಶ್ನೆಪತ್ರಿಕೆ ಸೋರಿಕೆಯಾದ ವಿಚಾರಕ್ಕೆ ಸಂಬಂಧಿಸಿ ನಾವು ಮತ್ತೊಮ್ಮೆ ಪರೀಕ್ಷೆಗಳನ್ನು ನಡೆಸುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.

ವಿಶ್ವವಿದ್ಯಾನಿಲಯದ ಐಟಿ ತಂಡ ನೀಡಿರುವ ವರದಿಯನ್ವಯ ಸೋರಿಕೆಯಾಗಿದೆ ಎಂದು ಹೇಳಲಾದ ಪ್ರಶ್ನೆ ಪತ್ರಿಕೆಯು ನಕಲಿ ಪ್ರಶ್ನೆಪತ್ರಿಕೆಯಾಗಿದ್ದು ಕೆಲ ಪುಂಡರು ರಚಿಸಿರುವ ನಕಲಿ ಪ್ರಶ್ನಾವಳಿಗಳು ಇದರಲ್ಲಿದೆ ಎಂದು ವಿಟಿಯು ಅಧಿಕಾರಿಗಳು ಹೇಳಿದ್ದಾರೆ.

ಈ ಕೃತ್ಯ ನಡೆಸಿದವರ ಮೂಲ ತಿಳಿದುಕೊಳ್ಳಲು ವಿಶ್ವವಿದ್ಯಾನಿಲಯ ತನಿಖಾ ಸಮಿತಿಯೊಂದನ್ನು ರಚಿಸಿದೆ. ಇದೇನು ಮೊದಲ ಬಾರಿ ನಡೆಯುತ್ತಿಲ್ಲ, ಈ ಹಿಂದೆಯೂ ನಕಲಿ ಪ್ರಶ್ನೆಪತ್ರಿಕೆಗಳು ಬಹಿರಂಗವಾಗಿದ್ದವು. ಈ ಸಂಬಂಧ ತನಿಖೆ ನಡೆಸಲು ಸಮಿತಿ ರಚಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಶುಕ್ರವಾರ ನಡೆದಿದ್ದ ಗಣಿತ 2(ಪುನರಾವರ್ತಿತ ಪತ್ರಿಕೆ) ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಗುರುವಾರವೇ ಸಾಮಾಜಿಕ ತಾಣಗಳಲ್ಲಿ ಅಕ್ರಮವಾಗಿ ಹರಿದಾಡುತ್ತಿದ್ದವು. ಬೆಳಗ್ಗೆ ಹತ್ತರ ವೇಳೆಗೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಸೋರಿಕೆಯಾದ ಪ್ರಶ್ನೆಪತ್ರಿಕೆಯನ್ನು ಒಳಗೊಂಡ ವಾಟ್ಸಾಪ್ ಸಂದೇಶಗಳು ಒಂಭತ್ತು ಗಂಟೆಯಿಂದಲೇ ಹರಿದಾಡಲು ಪ್ರಾರಂಭಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News