ಭಾರತಕ್ಕೆ ಮಹತ್ವ ನೀಡುವ ಅಮೆರಿಕ ರಕ್ಷಣಾ ಮಸೂದೆ ಅಂಗೀಕಾರ

Update: 2018-06-19 18:11 GMT

ವಾಶಿಂಗ್ಟನ್, ಜೂ. 19: ‘ಮಹತ್ವದ ರಕ್ಷಣಾ ಭಾಗೀದಾರ’ ಭಾರತದ ಜೊತೆಗಿನ ಸಂಬಂಧವನ್ನು ಬಲಪಡಿಸುವ ಉದ್ದೇಶದ 716 ಬಿಲಿಯ ಡಾಲರ್ (ಸುಮಾರು 49 ಲಕ್ಷ ಕೋಟಿ ರೂಪಾಯಿ) ರಕ್ಷಣಾ ಮಸೂದೆಗೆ ಅಮೆರಿಕ ಸೆನೆಟ್ ಸೋಮವಾರ ಅಂಗೀಕಾರ ನೀಡಿದೆ.

 ಅಮೆರಿಕ 2016ರಲ್ಲಿ ಭಾರತವನ್ನು ‘ಮಹತ್ವದ ರಕ್ಷಣಾ ಭಾಗೀದಾರ’ ಎಂಬುದಾಗಿ ಮಾನ್ಯ ಮಾಡಿದೆ. ಈ ಸ್ಥಾನಮಾನದ ಹಿನ್ನೆಲೆಯಲ್ಲಿ, ಭಾರತವು ಅಮೆರಿಕದಿಂದ ಅದರ ಅತ್ಯಂತ ಆಪ್ತ ಮಿತ್ರ ದೇಶಗಳು ಮತ್ತು ಭಾಗೀದಾರರಿಗೆ ಸರಿಸಮವಾಗಿ ಹೆಚ್ಚು ಸುಧಾರಿತ ಹಾಗೂ ಸೂಕ್ಷ್ಮ ತಂತ್ರಜ್ಞಾನಗಳನ್ನು ಖರೀದಿಸಬಹುದಾಗಿದೆ.

ರಾಷ್ಟ್ರೀಯ ರಕ್ಷಣಾ ಅಂಗೀಕಾರ ಕಾಯ್ದೆ (ಎನ್‌ಡಿಎಎ), 2019 ಮಸೂದೆಯನ್ನು 85-10 ಮತಗಳ ಅಂತರದಿಂದ ಅಂಗೀಕರಿಸಲಾಯಿತು.

ಅಫ್ಘಾನಿಸ್ತಾನ ಪಡೆಗಳ ನಿಧಿಗೆ 5.2 ಬಿಲಿಯ ಡಾಲರ್ ನೀಡುವ ಪ್ರಸ್ತಾಪವನ್ನು ಮಸೂದೆ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News