ಇನ್ಫೋಸಿಸ್ ಮಾಜಿ ಸಿಇಒ ವಿಶಾಲ್ ಸಿಕ್ಕಾ ಗೆ ಡಾಟಾ ಕಳ್ಳತನ ಬಗ್ಗೆ ಗೊತ್ತಿತ್ತು: ಅಮೆರಿಕ ಕಂಪೆನಿ ಆರೋಪ

Update: 2018-06-22 04:16 GMT

ವಾಷಿಂಗ್ಟನ್, ಜೂ.22: ವ್ಯಾಪಾರ ಮತ್ತು ಕ್ಲೌಡ್ ಅನಾಲಿಟಿಕ್ಸ್ ಕಂಪೆನಿಯಾದ 'ಟೆರಾಡಾಟಾ' ಜರ್ಮನಿಯ ವಹಿವಾಟು ಸಾಫ್ಟ್‌ವೇರ್ ತಯಾರಕ ಕಂಪನಿಯಾದ ಎಸ್‌ಎಪಿ ಎಜಿ ವಿರುದ್ಧ ಇದೀಗ ಕಾನೂನು ಸಮರ ಹೂಡಿದ್ದು, ಇನ್ಫೋಸಿಸ್‌ನ ಮಾಜಿ ಸಿಇಒ ವಿಶಾಲ್ ಸಿಕ್ಕಾ ವಿರುದ್ಧವೂ ಆರೋಪ ಮಾಡಿದೆ. ಎರಡು ಕಂಪೆನಿಗಳ ಜಂಟಿ ಸಹಭಾಗಿತ್ವದಲ್ಲಿ ಹಾನಾ ಪ್ಲಾಟ್‌ಫಾರಂ ನಿರ್ಮಿಸುವ ವೇಳೆ ವ್ಯಾಪಾರ ವಹಿವಾಟಿನ ರಹಸ್ಯಗಳನ್ನು ಕದಿಯುತ್ತಿದ್ದ ಬಗ್ಗೆ ವಿಶಾಲ್ ಸಿಕ್ಕಾ ಅವರಿಗೆ ಗೊತ್ತಿತ್ತು ಎಂದು ಅದು ಆಪಾದಿಸಿದೆ.

ಎಸ್‌ಎಪಿಯ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿರುವ ಸಿಕ್ಕಾ, ಎಸ್‌ಎಪಿಯ ಅನಾಲಿಟಿಕ್ಸ್ ಪ್ಲಾಟ್‌ಫಾರಂ ಹಾನಾ ನಿರ್ಮಾಣದ ಹಿಂದಿನ ಪ್ರತಿಭೆ ಎಂದು ಪರಿಗಣಿಸಲಾಗಿತ್ತು. ಈ ಪ್ಲಾಟ್‌ಫಾರಂ ಎಸ್‌ಎಪಿ ಸಂಸ್ಥೆಗೆ ತನ್ನ ಮಾರುಕಟ್ಟೆ ಉತ್ಪನ್ನಗಳ ಪುನಶ್ಚೇತನಕ್ಕೆ ಕಾರಣವಾಗಿತ್ತು.
ಸಿಕ್ಕಾ 2014ರ ಆಗಸ್ಟ್‌ನಿಂದ 2017ರ ಆಗಸ್ಟ್‌ವರೆಗೆ ಇನ್ಫೋಸಿಸ್ ಸಿಇಒ ಆಗಿದ್ದರು.

"ಹಾನಾ ಅಭಿವೃದ್ಧಿಪಡಿಸುವ ವೇಳೆ, ಎಸ್‌ಎಪಿಗೆ ಹಲವು ಸವಾಲುಗಳು ಎದುರಾದವು. ಟೆರಾಡಾಟಾ ಮತ್ತು ಎಸ್‌ಎಪಿ ಯೋಜನೆ ಸೇರಿಸುವ ವೇಳೆ ಹಲವು ಸಮಸ್ಯೆಗಳನ್ನು ಎದುರಿಸಿದವು. ಇದನ್ನು ಟೆರಾಡಾಟಾ ಎಂಜಿನಿಯರ್‌ಗಳು ಬಗೆಹರಿಸಿದರು. ಎಸ್‌ಎಪಿ ಮುಂಚೂಣಿಯ ಸಾಫ್ಟ್‌ವೇರ್ ಹಾಗೂ ಎಂಪಿಪಿ ಡಾಟಾಬೇಸ್ ಎಂಜಿನ್‌ನ ವೇಗ, ಕ್ಷಮತೆ ಮತ್ತು ಪರಿಣಾಮಕಾರಿ ವಿಶ್ಲೇಷಣೆಯ ಸಮಸ್ಯೆ ಬಗೆಹರಿಸಲಾಯಿತು. ದೊಡ್ಡ ಪ್ರಮಾಣದ ಮಾಹಿತಿಯನ್ನು ದಾಸ್ತಾನು ಮಾಡುವ ಹಾಗೂ ವಿಶ್ಲೇಷಿಸುವ ಸಲುವಾಗಿ ಇದು ಅನಿವಾರ್ಯವಾಗಿತ್ತು ಎಂದು ಅಮೆರಿಕದ ಉತ್ತರ ಕ್ಯಾಲಿಫೋರ್ನಿಯಾ ಜಿಲ್ಲೆಯ ನ್ಯಾಯಾಲಯದಲ್ಲಿ ಹೂಡಿರುವ ದಾವೆಯಲ್ಲಿ ವಿವರಿಸಲಾಗಿದೆ.

ಈ ಜಂಟಿ ಸಹಭಾಗಿತ್ವದ ಯೋಜನೆಯನ್ನು 2009ರಲ್ಲಿ ರೂಪಿಸಲಾಯಿತು. ಆದರೆ ಎಸ್‌ಎಪಿಯನ್ನು ಏಕಪಕ್ಷೀಯವಾಗಿ 2011ರಲ್ಲಿ ವಜಾಗೊಳಿಸಿದೆ ಹಾಗೂ ಎಸ್‌ಎಪಿ ಸ್ಪರ್ಧಾತ್ಮಕ ಉತ್ಪನ್ನ ಸೃಷ್ಟಿ ಮೂಲಕ ವಹಿವಾಟು ವೃದ್ಧಿಸಿಕೊಂಡಿದೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News