ಜಮ್ಮು-ಕಾಶ್ಮೀರದಲ್ಲಿ ಉಗ್ರರನ್ನು ಸದೆಬಡಿಯಲು ಎನ್ ಎಸ್ ಜಿ ಕಮಾಂಡೋಗಳ ಬಳಕೆ

Update: 2018-06-22 04:40 GMT

ಹೊಸದಿಲ್ಲಿ, ಜೂ.22:  ಉಗ್ರವಾದಿಗಳ  ಅಟ್ಟಹಾಸದಿಂದ ತತ್ತರಿಸಿರುವ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರನ್ನು ಸದೆ ಬಡಿಯಲು ರಾಷ್ಟ್ರೀಯ ಭದ್ರತಾ ಪಡೆಯ ಕಮಾಂಡೋಗಳನ್ನು ಬಳಕೆ ಮಾಡಲು ಕೇಂದ್ರ ಸರಕಾರ ನಿರ್ಧರಿಸಿದೆ.

ಈಗಾಗಲೇ ವಿಶೇಷ ಶಸ್ತ್ರಾಸ್ತ್ರಗಳೊಂದಿಗೆ ಎನ್​ಎಸ್​ಜಿ  ತಂಡವೊಂದು ಶ್ರೀನಗರಕ್ಕೆ ತಲುಪಿದ್ದು, ಬಿಎಸ್ ಎಫ್ ಶಿಬಿರದಲ್ಲಿ ತರಬೇತಿ ನಿರತವಾಗಿದೆ. ತಂಡದಲ್ಲಿ  ಸುಮಾರು 12 ಶಾರ್ಪ್​ ಶೂಟರ್ ಗಳು ಇದ್ದಾರೆ  ಎಂದು ತಿಳಿದು ಬಂದಿದೆ.

ವಿಮಾನ ಹೈಜಾಕ್​ ವಿರುದ್ಧದ ಕಾರ್ಯಾಚರಣೆಯಲ್ಲಿ ನಿಪುಣರಾಗಿರುವ ಎನ್ ಎಸ್ ಜಿ ಕಮಾಂಡೋಗಳು  ವಿಮಾನ ನಿಲ್ದಾಣದ ​ ಬಳಿ ಇರುವ ಗಡಿ ಭದ್ರತಾ ಪಡೆಯ ಶಿಬಿರದಲ್ಲಿ  ತಮ್ಮ ನೆಲೆಯನ್ನು ಸ್ಥಾಪಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶತ್ರುಗಳನ್ನು  ದೂರದಿಂದಲೇ ಗುರುತಿಸಿ ಹೊಡೆದುರುಳಿಸುವ ಸಾಮರ್ಥ್ಯವಿರುವ ಸ್ನೈಪರ್​ಗಳು ಮನೆಯೊಳಗೆ ಅಡಗಿರುವ ಉಗ್ರರ ಮಾಹಿತಿ ಕಲೆ ಹಾಕುವ ವಿಶೇಷ ರೇಡಾರ್​ಗಳನ್ನು ಹೊಂದಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News