ಮುಂಬೈನಲ್ಲಿ ಪ್ಲಾಸ್ಟಿಕ್ ನಿಷೇಧ: ನಿಯಮ ಪಾಲಿಸದಿದ್ದರೆ 25 ಸಾವಿರ ರೂ.ದಂಡ, 3 ವರ್ಷ ಜೈಲು

Update: 2018-06-23 07:44 GMT

ಮುಂಬೈ, ಜೂ.23: ಮುಂಬೈ ಮಹಾನಗರದಲ್ಲಿ ಇಂದಿನಿಂದಲೇ ಪ್ಲಾಸ್ಟಿಕ್ ನಿಷೇಧ ಜಾರಿಗೆ ತರಲಾಗಿದೆ. 249 ಸದಸ್ಯರನ್ನು ಒಳಗೊಂಡ ತಪಾಸಣಾ ತಂಡ ಬೀಚ್‌ಗಳು, ಬಸ್ ಹಾಗೂ ರೈಲ್ವೆ ನಿಲ್ದಾಣಗಳು ಹಾಗೂ ಪರಿಸರ ಸೂಕ್ಷ್ಮ ಸ್ಥಳಗಳಲ್ಲಿ ಹೆಚ್ಚು ನಿಗಾವಹಿಸಲಿದೆ.

ಒಂದು ವೇಳೆ ಪ್ಲಾಸ್ಟಿಕ್ ಬ್ಯಾಗ್ ಒಯ್ಯುತ್ತಿರುವುದು ಕಂಡು ಬಂದರೆ ಮೊದಲ ಬಾರಿ ತಪ್ಪಿಗೆ 5,000 ರೂ. ದಂಡ ವಿಧಿಸಲಾಗುತ್ತದೆ. ಎರಡನೇ ಬಾರಿ ತಪ್ಪೆಸಗಿದರೆ 10,000 ರೂ. ದಂಡ ತೆರಬೇಕಾಗುತ್ತದೆ. ಮೂರನೇ ಬಾರಿ ತಪ್ಪನ್ನು ಪುನರಾವರ್ತಿಸಿದರೆ 25,000 ರೂ. ಹಾಗೂ ಮೂರು ತಿಂಗಳ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ.

ಮಹಾರಾಷ್ಟ್ರ ಸರಕಾರ ಇಂದು ಹೊರಡಿಸಿರುವ ಅಧಿಸೂಚನೆಯಲ್ಲಿ ಎಲ್ಲ ರೀತಿಯ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆ, ಬಳಕೆ, ಮಾರಾಟ, ವಿತರಣೆ ಹಾಗೂ ಒಂದೇ ಬಾರಿ ಬಳಕೆ ಮಾಡುವ ಪ್ಲಾಸ್ಟಿಕ್ ಬ್ಯಾಗ್‌ಗಳು, ಚಮಚಗಳು, ಪ್ಲೇಟ್‌ಗಳು, ಬಾಟಲಿಗಳು ಹಾಗೂ ಥರ್ಮಾಕಾಲ್ ವಸ್ತುಗಳ ಶೇಖರಣೆಯನ್ನು ನಿಷೇಧಿಸಿ ಆದೇಶ ಹೊರಡಿಸಿದೆ.

ಬೃಹನ್ಮುಂಬಯಿ ಮಹಾನಗರ ಪಾಲಿಕೆ(ಬಿಎಂಸಿ) ಪ್ಲಾಸ್ಟಿಕ್ ನಿಷೇಧ ನಿಯಮವನ್ನು ಉಲ್ಲಂಘಿಸಿದವರಿಗೆ 25,000 ರೂ.ಕ್ಕೂ ಅಧಿಕ ದಂಡ ಹಾಗೂ ಮೂರು ವರ್ಷ ಜೈಲು ಶಿಕ್ಷೆ ವಿಧಿಸುವ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ಬಿಎಂಸಿಯ 249 ಸದಸ್ಯರ ತಂಡ ಜನರಲ್ಲಿ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News