ಐಐಟಿ ರ‍್ಯಾಂಕಿಂಗ್‌ನಲ್ಲಿ ಮುಂದುವರಿದ ಬಾಲಕಿಯರ ಕಳಪೆ ಸಾಧನೆ

Update: 2018-06-25 05:24 GMT

ಮುಂಬೈ, ಜೂ.25: ಐಐಟಿ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಅಗ್ರ 500 ರ‍್ಯಾಂಕಿಂಗ್‌ ಪೈಕಿ ಕೇವಲ 14 ವಿದ್ಯಾರ್ಥಿನಿಯರು ಮಾತ್ರ ಇದ್ದಾರೆ. ಇದು ಐಐಟಿ ತಾಂತ್ರಿಕ ಶಿಕ್ಷಣದಲ್ಲಿ ಲಿಂಗ ಅಂತರಕ್ಕೆ ಹಿಡಿದ ಕನ್ನಡಿಯಾಗಿದೆ. ಅಗ್ರ 1000 ಪಟ್ಟಿಯನ್ನು ಗಮನಿಸಿದರೂ, ಕೇವಲ 46 ವಿದ್ಯಾರ್ಥಿನಿಯರು ಮಾತ್ರ ಸ್ಥಾನ ಪಡೆದಿದ್ದು, ಬಾಲಕಿಯರ ಸಾಧನೆ ಕಳೆದ ವರ್ಷಕ್ಕಿಂತಲೂ ಕಳಪೆಯಾಗಿದೆ. ಕಳೆದ ವರ್ಷ ಅಗ್ರ 1000 ಮಂದಿಯ ಪೈಕಿ 68 ಮಹಿಳಾ ವಿದ್ಯಾರ್ಥಿಗಳಿದ್ದರು.

ಆದಾಗ್ಯೂ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಲಿಂಗ ವೈವಿಧ್ಯ ಯೋಜನೆಯಡಿ, ಕನಿಷ್ಠ ಶೇಕಡ 8ರಷ್ಟು ಹೆಚ್ಚು ಸ್ಥಾನಗಳನ್ನು ಈ ವರ್ಷ ಐಐಟಿಗೆ ಸೇರಿಸಿ ಹೆಚ್ಚು ವಿದ್ಯಾರ್ಥಿನಿಯರನ್ನು ಸೇರಿಸಿಕೊಳ್ಳಲು ಉದ್ದೇಶಿಸಲಾಗಿದೆ.

ಕಂಪ್ಯೂಟರ್ ಸೈನ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಂಥ ಜನಪ್ರಿಯ ವಾಹಿನಿಗಳಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚಿಸಲು ಉದ್ದೇಶಿಸಲಾಗಿದೆ. ಏಳು ಹಳೆ ಐಐಟಿಗಳ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಮಹಿಳಾ ಮೀಸಲು ಸ್ಥಾನಗಳನ್ನು ಸೇರಿಸಿ ಶೇಕಡ 3ರಷ್ಟು ವಿದ್ಯಾರ್ಥಿನಿಯಯರಿಗೆ ಅವಕಾಶ ಮಾಡಿಕೊಡಲು ಉದ್ದೇಶಿಸಲಾಗಿದೆ.

ಕಾನ್ಪುರ ಐಐಟಿ ಅಂಕಿಅಂಶದಿಂದ ತಿಳಿದುಬರುವಂತೆ ಜಂಟಿ ಪ್ರವೇಶ ಮಂಡಳಿ ಅಗ್ರ 24500 ರ‍್ಯಾಂಕ್ಗಳ ಪೈಕಿ 3000ಕ್ಕೂ ಹೆಚ್ಚು ವಿದ್ಯಾಥಿನಿಯರನ್ನು ಪಟ್ಟಿ ಮಾಡಲಾಗಿದೆ. ಅಗ್ರ 5000 ರ‍್ಯಾಂಕಿಂಗ್‌ನಲ್ಲಿ 410 ವಿದ್ಯಾರ್ಥಿಗಳಿದ್ದಾರೆ. ಅಗ್ರ 10000 ರ‍್ಯಾಂಕಿಂಗ್‌ನಲ್ಲಿ 935 ಬಾಲಕಿಯರಿದ್ದಾರೆ. ಮಹಿಳಾ ಮೀಸಲು ಕೋಟಾ ಹೊರತುಪಡಿಸಿ 23 ಐಐಟಿಗಳು 11,279 ಸೀಟುಗಳನ್ನು ಹೊಂದಿವೆ. ಆದರೆ ಅಗ್ರ 12 ಸಾವಿರ ಮಂದಿಯ ಪೈಕಿ ಇರುವುದು ಕೇವಲ 1202 ವಿದ್ಯಾರ್ಥಿನಿಯರು.

ಕಡ್ಡಾಯ ಮೀಸಲಾತಿ ಮತ್ತು ಬಾಲಕಿಯರಿಗೆ ಹೆಚ್ಚುವರಿ ಸೀಟುಗಳು ಸೇರಿ ಕನಿಷ್ಠ ಶೇಕಡ 14ರಷ್ಟು ಬಾಲಕಿಯರನ್ನು ಐಐಟಿಗಳಿಗೆ ಸೇರಿಸುವುದು ಉದ್ದೇಶ ಎಂದು ಜೆಇಇ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News