ಕಾಶ್ಮೀರದ ಇಬ್ಬರು ಪತ್ರಕರ್ತರ ವಿರುದ್ಧ ಅಪಪ್ರಚಾರ ನಡೆಸುತ್ತಿರುವ ಅಪರಿಚಿತರ ಬ್ಲಾಗ್: ಆರೋಪ

Update: 2018-06-25 11:02 GMT
ಕಾಶ್ಮೀರಿ ಪತ್ರಕರ್ತ ಅಹ್ಮದ್ ಅಲಿ ಫಯಾಝ್ 

ಜಮ್ಮು, ಜೂ.25: ಇತ್ತೀಚೆಗೆ ಹತ್ಯೆಗೈಯ್ಯಲ್ಪಟ್ಟ ರೈಸಿಂಗ್ ಕಾಶ್ಮೀರ್ ಪತ್ರಿಕೆಯ  ಮುಖ್ಯ ಸಂಪಾದಕ ಶುಜಾತ್ ಬುಖಾರಿಯವರ ವಿರುದ್ಧ ಅಪಪ್ರಚಾರ ನಡೆಸಿದ್ದ ಅಪರಿಚಿತ ವ್ಯಕ್ತಿಗಳು ತನ್ನ ಹಾಗೂ ಇನ್ನೊಬ್ಬ ಪತ್ರಕರ್ತ ಇಫ್ತಿಕಾರ್ ಗೀಲಾನಿಯವರನ್ನು 'ಟಾರ್ಗೆಟ್' ಮಾಡುತ್ತಿದ್ದಾರೆಂದು  ಕಾಶ್ಮೀರಿ ಪತ್ರಕರ್ತ ಅಹ್ಮದ್ ಅಲಿ ಫಯಾಝ್  ಆರೋಪಿಸಿದ್ದಾರೆ.

ಬುಖಾರಿಯವರ ಹತ್ಯೆ ನಡೆದ ದಿನಕ್ಕಿಂತ 11 ದಿನಗಳ ಮೊದಲು ಪ್ರಕಟವಾದ 'ಟೌಟ್ಸ್ ಹೂ ಆರ್ ಬಿಟ್ರೇಯಿಂಗ್ ದಿ ಕಾಶ್ಮೀರ್ ಸ್ಟ್ರಗಲ್' ಎಂಬ ಬ್ಲಾಗ್ ಪೋಸ್ಟ್ ಒಂದನ್ನು ಬರೆದಿರುವ ಅನಾಮಿಕ ವ್ಯಕ್ತಿಯೊಬ್ಬ ಇತರ ಪತ್ರಕರ್ತರು, ಉದ್ಯಮಿಗಳು, ರಾಜಕಾರಣಿಗಳನ್ನು ಟಾರ್ಗೆಟ್ ಮಾಡಿದ್ದಾರಲ್ಲದೆ ಅವರು "ಕಾಶ್ಮೀರಕ್ಕಾಗಿ ಹೋರಾಟಕ್ಕೆ'' ವಿಶ್ವಾಸದ್ರೋಹಗೈದಿದ್ದಾರೆ ಹಾಗೂ ಅವರು ಕಾಶ್ಮೀರದ ಹಿತಾಸಕ್ತಿಯ ವಿರುದ್ಧ  ಕಾರ್ಯಾಚರಿಸುತ್ತಿದ್ದಾರೆಂದು ಆರೋಪಿಸಿದ್ದರು.

"ಈ ಬ್ಲಾಗ್ ಪೋಸ್ಟ್ ನಲ್ಲಿ ನಮ್ಮ ಫೋಟೋಗಳನ್ನೂ ಹಾಕಿ ಹಲವಾರು ಕೆಟ್ಟ ಪದಗಳನ್ನು ಉಪಯೋಗಿಸಿ ನಮ್ಮನ್ನು ದುಷ್ಟ ವ್ಯಕ್ತಿಗಳೆಂಬಂತೆ ಬಿಂಬಿಸಲಾಗಿದೆ'' ಎಂದು ಫಯಾಝ್ ತಮ್ಮ ಫೇಸ್ ಬುಕ್‍ಪೋಸ್ಟ್ ನಲ್ಲಿ ಹೇಳಿದ್ದಾರಲ್ಲದೆ ತಮ್ಮ ವಿರುದ್ಧದ ಆರೋಪಗಳು ಆಧಾರರಹಿತ ಎಂದಿದ್ದಾರೆ. ತಾವು ಯಾವತ್ತೂ ಕಾಶ್ಮೀರ ಹಿತಾಸಕ್ತಿಯ ಸಂರಕ್ಷಕನೆಂಬಂತೆ ತಮ್ಮನ್ನು ಬಿಂಬಿಸಿಲ್ಲ ಹಾಗೂ ಬಿಜೆಪಿ ನಾಯಕ ಚೌಧುರಿ ಲಾಲ್ ಸಿಂಗ್ ಅವರು ಪತ್ರಕರ್ತರಿಗೆ ನೀಡಿರುವ ಬೆದರಿಕೆಯ ಬಗ್ಗೆ ಮಾತನಾಡಿಲ್ಲ ಎಂದಿದ್ದಾರೆ.

ಅಸಹಾಯಕ ಜನರ ಮೇಲೆ ದೌರ್ಜನ್ಯ ನಡೆಸಿದ ರಾಜ್ಯದ ಹಾಗೂ ಹೊರಗಿನವರ ವಿರುದ್ಧ ತಾವು ಬರೆದಿದ್ದಾಗಿ ಫಯಾಝ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News