ಸಾಲ ತೀರಿಸಲು ಪ್ರಯತ್ನ : ಮಲ್ಯ

Update: 2018-06-26 09:14 GMT

ಹೊಸದಿಲ್ಲಿ, ಜೂ.26: ವಿವಿಧ ಬ್ಯಾಂಕ್ ಗಳಿಂದ ಪಡೆದುಕೊಂಡಿರುವ   ಸಾಲವನ್ನು ಮರುಪಾವತಿಗೆ ತನ್ನಿಂದ ಸಾಧ್ಯವಿರುವ ಪ್ರಯತ್ನ ನಡೆಸುವುದಾಗಿ ಮದ್ಯದ ದೊರೆ ವಿಜಯ ಮಲ್ಯ ತಿಳಿಸಿದ್ದಾರೆ.

ಲಂಡನ್ ನಲ್ಲಿ ತಲೆಮರೆಸಿಕೊಂಡಿರುವ ಮಲ್ಯ ಅವರು  ವಿವಿಧ ಬ್ಯಾಂಕ್ ಗಳಿಗೆ ಬಾಕಿ ಉಳಿಸಿಕೊಂಡಿರುವ ಸಾಲ ಮರು ಪಾವತಿಗೆ ಪ್ರಯತ್ನ ನಡೆಸುವುದಾಗಿ ಬ್ಯಾಂಕ್ ಗಳಿಗೆ ಬರೆದಿರುವ ಪತ್ರದಲ್ಲಿ  ತಿಳಿಸಿರುವುದಾಗಿ  ವರದಿಯಾಗಿದೆ.

 ಮಲ್ಯ ಸುಮಾರು 9 ಸಾವಿರಕೋಟಿ ರೂ. ಅಧಿಕ ಸಾಲ ತೀರಿಸದೆ ತಲೆಮರೆಸಿಕೊಂಡು 2016ರಲ್ಲಿ ವಿದೇಶಕ್ಕೆ ಪರಾರಿಯಾಗಿದ್ದರು.

ಎ16, 2016ರಲ್ಲಿ ಸಾಲ ಮರುಪಾವತಿ ಬಗ್ಗೆ ಪ್ರಧಾನ ಮಂತ್ರಿ ಮತ್ತು ಹಣಕಾಸು ಸಚಿವರಿಗೆ ಪತ್ರ ಬರೆದಿದ್ದೆ. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಕಂಡು ಬರಲಿಲ್ಲ. ಆ ಕಾರಣದಿಂದಾಗಿ ತಾನು ಈ ವಿಚಾರವನ್ನು ಬಹಿರಂಗ ಪಡಿಸಿರುವುದಾಗಿ ಲಂಡನ್ ನಿಂದ ಸುದ್ದಿ ಸಂಸ್ಥೆಯೊಂದಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News