ಇಸ್ಲಾಮೊಫೋಬಿಕ್ ಹೇಳಿಕೆ: ಭಾರತ ಮೂಲದ ಬ್ರಿಟಿಶ್‌ ವ್ಯಕ್ತಿಗೆ ಜೈಲು

Update: 2018-06-26 17:13 GMT

ಲಂಡನ್, ಜೂ. 26: ಕಳೆದ ವರ್ಷ ಮ್ಯಾಂಚೆಸ್ಟರ್‌ನ ಅರಿಯಾನ ಗ್ರಾಂಡ್‌ನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರ ಮೇಲೆ ನಡೆದ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಇಸ್ಲಾಮೊಫೋಬಿಕ್ ಹೇಳಿಕೆಗಳನ್ನು ನೀಡಿದ್ದ ಭಾರತ ಮೂಲದ ಬ್ರಿಟಿಶ್ ವ್ಯಕ್ತಿಯೊಬ್ಬನಿಗೆ 20 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ರಾಡಿನ್ ಚಂದ್ ವಿರುದ್ಧದ ಆನ್‌ಲೈನ್ ಮೂಲಕ ಜನಾಂಗೀಯ ದ್ವೇಷ ಹರಡಿದ ಆರೋಪವು ಸಾಬೀತಾಗಿದೆ ಎಂದು ಬರ್ಮಿಂಗ್‌ಹ್ಯಾಮ್ ಕ್ರೌನ್ ನ್ಯಾಯಾಲಯ ಸೋಮವಾರ ಹೇಳಿದೆ.

ಅವನ ಟ್ವಿಟರ್ ಸಂದೇಶಗಳು ಮುಸ್ಲಿಮರು ಮತ್ತು ಮಸೀದಿಗಳ ವಿರುದ್ಧ ಹಿಂಸಾಚಾರಕ್ಕೆ ಪ್ರೇರಣೆ ನೀಡುವಂತಿದ್ದವು. ತಾನು ಮುಸ್ಲಿಮ್ ವ್ಯಕ್ತಿಯೊಬ್ಬನ ಕತ್ತು ಸೀಳಬಯಸುತ್ತೇನೆ ಎಂಬುದಾಗಿ ಆತ ಒಂದು ಟ್ವೀಟ್‌ನಲ್ಲಿ ಹೇಳಿದ್ದನು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News