ಬ್ಯಾಂಕ್ ಗಳ ಅನುತ್ಪಾದಕ ಸಾಲ ಈ ವರ್ಷ ಮತ್ತಷ್ಟು ಏರಿಕೆಯಾಗಲಿದೆ ಎಂದ ಆರ್ ಬಿಐ

Update: 2018-06-27 08:40 GMT

ಮುಂಬೈ, ಜೂ.27: ಸಾರ್ವಜನಿಕ ರಂಗದ ಬ್ಯಾಂಕುಗಳ ಅನುತ್ಪಾದಕ ಸಾಲಗಳ ಪ್ರಮಾಣ ಈ ವರ್ಷ ಇನ್ನಷ್ಟು ಹೆಚ್ಚಾಗಿ ಈಗಾಗಲೇ ಸಾಕಷ್ಟು ಹೊರೆಯೆದುರಿಸುತ್ತಿರುವ ಆರ್ಥಿಕ ವ್ಯವಸ್ಥೆಗೆ ಇನ್ನಷ್ಟು ಸಮಸ್ಯೆ ಸೃಷ್ಟಿಸಲಿದೆ ಎಂದು ಮಂಗಳವಾರ ಬಿಡುಗಡೆಯಾದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ  ಆರ್ಥಿಕ ಸುಸ್ಥಿರತೆ ವರದಿ ಎಚ್ಚರಿಸಿದೆ.

ಮಾರ್ಚ್ 2019ರೊಳಗಾಗಿ ಬ್ಯಾಂಕುಗಳ ಗರಿಷ್ಠ ಎನ್‍ಪಿಎ  ಕಳೆದ ಆರ್ಥಿಕ ವರ್ಷದಲ್ಲಿದ್ದ ಶೇ 11.6ರಿಂದ ಶೇ 12.2ರಷ್ಟಾಗಲಿದೆಯೆಂದು ವರದಿ ತಿಳಿಸಿದೆ.

ಹೆಚ್ಚುತ್ತಿರುವ ಅನುತ್ಪಾದಕ ಸಾಲಗಳಿಂದಾಗಿ ಬ್ಯಾಂಕುಗಳ ಕ್ಯಾಪಿಟಲ್ ಎಡಕ್ವೆಸಿ ಅನುಪಾತ ಕೂಡ ಕಳೆದ ಆರ್ಥಿಕ ವರ್ಷದ ಕೊನೆಗಿದ್ದ ಶೇ.13.5ರಿಂದ ಮಾರ್ಚ್ 2019ರ ವೇಳೆಗೆ ಶೇ 12.8ರಷ್ಟಾಗಲಿದೆ. ಬ್ಯಾಂಕುಗಳು ಗಳಿಸುತ್ತಿರುವ  ಕಡಿಮೆ ಲಾಭ ಕೂಡ ಆತಂಕಕಾರಿ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News