ಡಾಲರ್ ಎದುರು ತೀವ್ರ ಕುಸಿತ ಕಂಡ ರೂಪಾಯಿ ಮೌಲ್ಯ

Update: 2018-06-28 07:13 GMT

ಹೊಸದಿಲ್ಲಿ, ಜೂ.28: ಡಾಲರ್ ಎದುರು ರೂಪಾಯಿ ಮೌಲ್ಯ ಹಿಂದೆಂದಿಗಿಂತಲೂ ಅತ್ಯಧಿಕ ಕುಸಿತವನ್ನು ಗುರುವಾರ ಕಂಡಿದೆ.  ಬೆಳಿಗ್ಗೆ  11:12 ಸುಮಾರಿಗೆ ರೂಪಾಯಿ ಮೌಲ್ಯ ಡಾಲರ್ ಎದುರು  68.92/93 ಆಗಿತ್ತು. ಈ ಹಿಂದೆ ನವೆಂಬರ್  24, 2016ರಲ್ಲಿ ರೂಪಾಯಿ ದರ ಡಾಲರ್ ಎದುರು  68.8650ರಷ್ಟು ಕುಸಿದಿತ್ತು.

ಹೆಚ್ಚುತ್ತಿರುವ ಕಚ್ಛಾ ತೈಲ ಬೆಲೆಗಳು  ಈ ಬೆಳವಣಿಗೆಗೆ ಕಾರಣವೆನ್ನಲಾಗಿದ್ದು. ತೈಲಕ್ಕೆ ಹೆಚ್ಚುತ್ತಿರುವ ಬೇಡಿಕೆ ಹಾಗೂ   ಪೆಟ್ರೋಲಿಯಂ ರಫ್ತು  ದೇಶಗಳ ಸಂಘಟನೆಯಿಂದ ಸ್ವಯಂಪ್ರೇರಿತ ಪೂರೈಕೆ ಕಡಿತ ಕೂಡ ಕಾರಣವೆನ್ನಲಾಗಿದೆ.

ಬುಧವಾರ ಮಾರುಕಟ್ಟೆ ಅಂತ್ಯಗೊಂಡಾಗ ಡಾಲರ್ ಎದುರು ರೂಪಾಯಿ ಮೌಲ್ಯ 68.65/66ರಷ್ಟಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News