ಭಾರತದ ಗಡಿ ಪ್ರವೇಶಿಸಿದ್ದ ಪಾಕ್ ಬಾಲಕನನ್ನು ವಾಪಸ್ ಕಳುಹಿಸಿದ ಸೇನೆ ಆತನಿಗೆ ನೀಡಿದ್ದೇನು?

Update: 2018-06-28 08:13 GMT

ಜಮ್ಮು, ಜೂ.28: ನಾಲ್ಕು ದಿನಗಳ ಹಿಂದೆ ಆಕಸ್ಮಾತ್ತಾಗಿ  ಜಮ್ಮು ಕಾಶ್ಮೀರದ ಪೂಂಚ್  ಜಿಲ್ಲೆಯ ಮುಖಾಂತರ ಭಾರತದ ಗಡಿಯನ್ನು ಪ್ರವೇಶಿಸಿದ್ದ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನಿವಾಸಿಯಾಗಿರುವ ಹನ್ನೊಂದು ವರ್ಷದ ಬಾಲಕನೊಬ್ಬನನ್ನು ಬುಧವಾರ ಪಾಕಿಸ್ತಾನಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.

ಮುಹಮ್ಮದ್ ಅಬ್ದುಲ್ಲಾ ಎಂಬ ಹೆಸರಿನ ಈ ಬಾಲಕನನ್ನು  ಸೇನಾ ಸಿಬ್ಬಂದಿ ಜೂನ್ 24ರಂದು ಪೂಂಚ್ ಜಿಲ್ಲೆಯ ದೇಗ್ವರ್ ಪ್ರದೇಶದಲ್ಲಿ ನೋಡಿದ ನಂತರ ಆತನನ್ನು ಅದೇ ದಿನ ಜಮ್ಮು ಕಾಶ್ಮೀರ ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು.

ಅಬ್ದುಲ್ಲಾ ಇನ್ನೂ ಸಣ್ಣ ಪ್ರಾಯದವನಾಗಿರುವುದರಿಂದ ಆತನನ್ನು ಮಾನವೀಯ ನೆಲೆಯಲ್ಲಿ ಹಾಗೂ ಭಾರತ-ಪಾಕಿಸ್ತಾನ ನಡುವೆ ವಿಶ್ವಾಸದ ವಾತಾವರಣ ಬೆಳೆಸುವ ದೃಷ್ಟಿಯಿಂದ ಬಿಡುಗಡೆಗೊಳಿಸಲಾಗಿದೆ  ಎಂದು ರಕ್ಷಣಾ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.

ವಾಪಸ್ ಕಳುಹಿಸುವಾಗ ಬಾಲಕನಿಗೆ ಒಂದು ಜತೆ ಹೊಸ ಬಟ್ಟೆಗಳನ್ನು ಹಾಗೂ ಸಿಹಿತಿಂಡಿಗಳಿರುವ ಪೆಟ್ಟಿಗೆ ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News