ರಾಜರ್ಷಿ ಛತ್ರಪತಿ ಶಾಹೂ

Update: 2018-06-28 18:19 GMT

ಅಸ್ಪಶ್ಯರ ಪ್ರಗತಿಯ ಸಲುವಾಗಿ ಮತ್ತು ಅವರ ಚಳವಳಿ ವಿಸ್ತೃತಗೊಳಿಸಲು ಯಾವ ವರಿಷ್ಠ ವರ್ಗದ ಜನರು ಮನಃಪೂರ್ವಕವಾಗಿ ಪ್ರಯತ್ನಪಟ್ಟರೋ, ಅದರಲ್ಲಿ ಕೋಲ್ಹಾಪುರದ ರಾಜರ್ಷಿ ಛತ್ರಪತಿ ಶಾಹೂ ಮಹಾರಾಜರು ಅಗ್ರಗಣ್ಯರಾಗಿದ್ದರು. ಇಷ್ಟೇ ಅಲ್ಲದೆ ಮಹಾರಾಷ್ಟ್ರದಲ್ಲಿ ಅಸ್ಪಶ್ಯರ ಚಳವಳಿಗೆ ವ್ಯಾಪಕ ಮತ್ತು ಚಿರಾಯು ಸ್ವರೂಪ ಸ್ವಲ್ಪ ಯಾರಾದರೂ ಕೊಟ್ಟಿದ್ದರೆ, ಅದು ಅವರೇ ಆಗಿರುತ್ತದೆ. ರಾಜರ್ಷಿಯ ಜನ್ಮ 25 ಜುಲೈ 1874ರಲ್ಲಿ ಆಯಿತು. ಕೊಲ್ಹಾಪುರ ಸಂಸ್ಥಾನದ ಮಹಾರಾಣಿ ಆನಂದೀಬಾಯಿ ಸಾಹೇಬ ಅವರು 17 ಮಾರ್ಚ್ 1884ರಲ್ಲಿ ಅವರನ್ನು ದತ್ತಕ ತೆಗೆದುಕೊಂಡರು. ತಾ. 2 ಎಪ್ರಿಲ್ 1894ರಲ್ಲಿ ಅವರು ಸಿಂಹಾಸನದ ಮೇಲೆ ಸ್ಥಾಪಿತರಾದರು. ಆಗ ಅವರಿಗೆ ಆಶ್ಚರ್ಯಚಕಿತರಾಗುವಂತಹ ಮತ್ತು ದುಃಖದಿಂದ ವ್ಯಾಕುಲವಾಗುವ ದೃಶ್ಯ ಕಾಣಿಸಿದ್ದರೆ ಅದು ಅವರ ಸಂಸ್ಥಾನದ ಮತ್ತು ಸ್ಥಾನಿಕ ಸ್ವರಾಜ್ಯದ ಖಾತೆಯ ಬ್ರಾಹ್ಮಣ ಜಾತಿಯ ಜನರ ಕೈಯಲ್ಲಿ ಅನಿಯಂತ್ರಿತವಾಗಿ ನಡೆದ ಕಾರಭಾರ. ಬ್ರಾಹ್ಮಣೇತರ ಜಾತಿಯ ಜನರನ್ನು ಬೆರಳ ಮೇಲೆ ಕುಣಿಸುತ್ತಿದ್ದರು. ಇದರ ಕಾರಣ ಏನು ಮತ್ತು ಈ ಕಾರಣವನ್ನು ಹೇಗೆ ದೂರ ಮಾಡುವುದು ಎನ್ನುವ ವಿಚಾರ ಛತ್ರಪತಿಯವರ ತಲೆಯಲ್ಲಿ ಒಂದೇ ರೀತಿ ಸುತ್ತುತ್ತಿತ್ತು. ಬ್ರಾಹ್ಮಣ ಜಾತಿಯಲ್ಲಿ ಶಿಕ್ಷಣ ಪ್ರಸಾರ ಸಾಕಷ್ಟು ಆಗಿತ್ತು. ಅಲ್ಲದೆ ಪೇಶ್ವೆಯವರ ಆಡಳಿತದಿಂದ ರಾಜ್ಯ ಕಾರಭಾರದ ಖಾತೆಯಲ್ಲಿ ಬ್ರಾಹ್ಮಣರ ಹಿರಿಯ ಸ್ಥಾನ, ಪರಂಪರೆಯಿಂದ ಖಾಯಮ್ಮಾಗಿ ಕುಳಿತಿತ್ತು. ಬ್ರಾಹ್ಮಣೇತರ ವರ್ಗದಲ್ಲಿ ಶಿಕ್ಷಣ ಪ್ರಸಾರ ಇನ್ನೂ ಆಗಿರಲಿಲ್ಲ ಮತ್ತು ರಾಜ್ಯ ಕಾರಭಾರದ ಖಾತೆಗಳಲ್ಲಿ ಅವರ ಪ್ರವೇಶ ಆಗಿರಲಿಲ್ಲ. ಯಾರಿಗೆ ಪ್ರವೇಶ ಸಿಕ್ಕಿತೋ ಅವರು ಸಿಪಾಯಿಗಳು, ಪ್ರಹರಿಗಳು, ದ್ವಾರಪಾಲಕರುಗಳೇ. ವಿಚಾರಣೆ ಮಾಡಿದ ನಂತರ ಛತ್ರಪತಿಯವರು ಮನಸ್ಸಿನಲ್ಲೇ ಹೀಗೆ ನಿಶ್ಚಿತವಾಗಿ ಯೋಚಿಸಿಕೊಂಡರು, ಬ್ರಾಹ್ಮಣೇತರರ ಕೈಯಲ್ಲಿ ಅಧಿಕಾರ ಸೂತ್ರವನ್ನು ತಂದುಕೊಡಬೇಕಾದರೆ, ಅದರ ಸಲುವಾಗಿ ಅವರಲ್ಲಿ ಶಿಕ್ಷಣ ಪ್ರಸಾರವನ್ನು ಜಾರಿಗೆ ತಂದು ಸುಶಿಕ್ಷಿತ ಜನರನ್ನು ತಯಾರು ಮಾಡಬೇಕು ಮತ್ತು ಅವರನ್ನು ಅಧಿಕಾರಿ ಮತ್ತು ಇತರ ಪದವಿಗಳಲ್ಲಿ ನೇಮಿಸುವುದು ಮತ್ತು ಅದರ ಸಲುವಾಗಿ ಬಹುಜನಸಮಾಜದಲ್ಲಿ ಜಾಗೃತಿಯ ದೊಡ್ಡ ಚಳವಳಿಯನ್ನು ನಡೆಸಬೇಕು. ಅದರಂತೆ ಛತ್ರಪತಿಯವರು ಸಂಸ್ಥೆಯಲ್ಲಿ ಸಂಚಾರ ಮಾಡಿ ಶಿಕ್ಷಣ ಪ್ರಸಾರದ ಮತ್ತು ಲೋಕ ಜಾಗೃತಿಯ ಚಳವಳಿಯನ್ನು ಠೀವಿಯಿಂದ ಆರಂಭಿಸಿದರು.

ಬ್ರಾಹ್ಮಣೇತರ ಜಾತಿಯಲ್ಲಿ ಬುದ್ಧಿವಂತ ವಿದ್ಯಾರ್ಥಿಗಳಿಗೆ ಶಿಷ್ಯವೃತ್ತಿಯನ್ನು ಕೊಡುವುದು ಮತ್ತು ಅಲ್ಲಲ್ಲಿ ವಸತಿಗೃಹವನ್ನು ಆರಂಭಿಸಿ ಅವುಗಳಿಗೆ ಸ್ವಂತವಾದ ದ್ರವ್ಯ ಸಹಾಯವನ್ನು ಮಾಡುವ, ಹೀಗೆ ಅಲ್ಲಲ್ಲಿ ಕೊರತೆ ನೀಗಿಸುವ ಸಾಕಷ್ಟು ಕೆಲಸವನ್ನು ಛತ್ರಪತಿಯವರು ಕೈಗೆತ್ತಿಕೊಂಡರು. ಮಹಾರ್, ಮಾಂಗ್, ಢೋರ್, ಚಮ್ಮಾರ್ ಮರಾಠೆ, ಶಿಂಪಿಗ, ಕ್ಷೌರಿಕ, ಮುಸಲ್ಮಾನ ಮುಂತಾದ ಜಾತಿಯ ಮಕ್ಕಳು ಕಲಿತು ತಯಾರಾದ ಮೇಲೆ ಅವರಿಗೆ ಸಂಸ್ಥಾನದ ಬೇರೆ ಬೇರೆ ಖಾತೆಗಳಲ್ಲಿ ಛತ್ರಪತಿಯವರು ನೇಮಿಸಿದರು. ಕೆಲವರು ವಕೀಲಿಯ ಪರೀಕ್ಷೆಯನ್ನು ಕೊಟ್ಟರು. ಇದರ ಸಲುವಾಗಿ ಅವರು 1902ರಿಂದ ಸಂಸ್ಥಾನದಲ್ಲಿ ಅರ್ಧ ಜಾಗ ಹಿಂದುಳಿದ ಜನರಿಗಾಗಿ ಮೀಸಲಿಟ್ಟರು. ಇದರಿಂದ ನೌಕರಿಯ ಯನ್ನು ಅನುಭವಿಸುತ್ತಿದ್ದ ಬ್ರಾಹ್ಮಣರಿಗೆ ಸಂಸ್ಥಾನದಲ್ಲಿ, ನೌಕರಿ ಸಿಗುವುದು ಅಶಕ್ಯವಾಯಿತು. ಅಲ್ಲದೆ ಬ್ರಾಹ್ಮಣೇತರರಿಗೆ ಸಮಾಜದಲ್ಲಿ ಸ್ವಂತ ಹಕ್ಕಿನ ಬಗ್ಗೆ ತಿಳುವಳಿಕೆ ಮೂಡಿದ್ದರಿಂದ ದಿನನಿತ್ಯದ ಪರಿಣಾಮವಾಗಿ ಬ್ರಾಹ್ಮಣರು ಛತ್ರಪತಿಯನ್ನು ಶತ್ರುವೆಂದು ತಿಳಿಯಲಾರಂಭಿಸಿದರು.

1900 ಸಾಲಿನ ಕಾರ್ತಿಕದ ಏಕಾದಶಿಯ ದಿವಸ ಮಹಾರಾಜ ಸಹ ಪರಿವಾರ ಸೂರ್ಯೋದಯದ ಮುಂಚೆ ಪಂಚಗಂಗೆಯ ಸ್ಥಾನಕ್ಕೆ ಹೋದರು. ಆಗ ಅವರ ರಾಜೋಪಾಧ್ಯರು ತಡಮಾಡಿ ಬಂದರು. ಮಹಾರಾಜರು ಅವರಿಗೆ ಮೊದಲು ಸ್ನಾನ ಮಾಡಲು ಹೇಳಿದರು. ಆಗ ಅವರು ಹೇಳಿದ್ದೇನೆಂದರೆ ''ನನಗೆ ಥಂಡಿಯ ಸಲುವಾಗಿ ನೀರು ತಣ್ಣಗೆನಿಸುತ್ತದೆ, ಅಲ್ಲದೆ ನಾನು ಪುರಾಣೋಕ್ತ ಮಂತ್ರ ಹೇಳುವುದರಿಂದ ನನಗೆ ಶುಚಿರ್ಭೂತವಾಗುವ ಕಾರಣವಿಲ್ಲ.'' ಇದನ್ನು ಕೇಳಿ ಮಹಾರಾಜರು ಸಂತಾಪಗೊಂಡು ಹೇಳಿದರು, ''ನಾವು ಸ್ನಾನ ಮಾಡುವ ಮೊದಲು ನೀವು ಸ್ನಾನ ಮಾಡಿ ತಯಾರಾಗಿದ್ದು, ನಮ್ಮ ಸ್ನಾನದ ವೇಳೆ ವೇದೋಕ್ತ ಮಂತ್ರವನ್ನು ಇಷ್ಟು ವರ್ಷ ಹೇಳುತ್ತಾ ಬಂದಿದ್ದೀರಿ ಮತ್ತು ಇವತ್ತೇ ನಿಮಗೆ ಯಾವ ಹುಚ್ಚು ಹಿಡಿದಿದೆ?'' ಇದರ ಮೇಲೆ ಬ್ರಾಹ್ಮಣ ಹೇಳಿದ್ದೇನೆಂದರೆ ''ಮಹಾರಾಜ ನೀವು ರಾಜರಾದರೂ ಸಹ ನೀವು ಶೂದ್ರರಾಗಿದ್ದೀರಿ ಮತ್ತು ನಿಮಗೆ ವೇದೋಕ್ತ ಮಂತ್ರ ಕೇಳುವ ಅಧಿಕಾರವಿಲ್ಲ. ನೀವು ಪುರಾಣೋಕ್ತ ಮಂತ್ರ ಮಾತ್ರವೇ ಕೇಳಬೇಕು ಮತ್ತು ಅದಕ್ಕೆ ನಾನು ಶುಚಿರ್ಭೂತನಾಗದೆ ಹೇಳಿದರೂ ಸಹ ಅದಕ್ಕೆ ಶಾಸ್ತ್ರದ ಅಡಚಣೆ ಇಲ್ಲ.'' ರಾಜೋಪಾಧ್ಯ ಅವರ ಗರ್ವಿಷ್ಠವಾದ ಗಿಣಿಪಾಠದ ಮಾತನ್ನು ಕೇಳಿ ಮಹಾರಾಜರು ಸಿಟ್ಟಿನಿಂದ ಥರಥರ ನಡುಗಿದರು. ಅವರು ಹಿಂದೂ ಧರ್ಮವನ್ನು ತ್ಯಾಗ ಮಾಡಿ ಆರ್ಯಧರ್ಮವನ್ನು ಸ್ವೀಕರಿಸಿದರು.

ಮೇಲಿನ ಉದಾಹರಣೆ ಮತ್ತು ಇತರ ಉದಾಹರಣೆಗಳನ್ನು ಲಕ್ಷದಲ್ಲಿಟ್ಟು ವೈದಿಕ ಕಾಲದಿಂದ ಇವತ್ತಿನವರೆಗೂ ಬ್ರಾಹ್ಮಣರು ಬ್ರಾಹ್ಮಣೇತರರಿಗೆ ಧಾರ್ಮಿಕ ಬಂಧನದಿಂದ ಹೇಗೆ ಕಟ್ಟಿಹಾಕಿದ್ದಾರೆ ಮತ್ತು ಆ ಬಂಧನಗಳನ್ನು ದೂರ ಮಾಡುವುದು ಹೇಗೆ ಆವಶ್ಯಕವಾಗಿದೆ ಎಂಬುದರ ಸಾಕಷ್ಟು ತಿಳಿವಳಿಕೆ ಮಹಾರಾಜರಿಗೆ ಮೂಡಿತು. ಇದರ ಸಲುವಾಗಿ ಅವರು 11 ಜನವರಿ 1911ರಂದು ಮಹಾತ್ಮಾ ಫುಲೆಯವರ ಸತ್ಯಶೋಧಕ ಸಮಾಜದ ಪುನರುಜ್ಜೀವನ ಮಾಡಿದರು. ಆ ಚಳವಳಿಯಿಂದಲೇ ಮುಂದೆ ಸತ್ಯಶೋಧಕ ಯೋಜನೆಗಳು ಹೊರಟವು. ಈ ವಿವಿಧ ಯೋಜನೆಗಳಿಗೆ ಮಹಾರಾಜರು ಉದಾರವಾಗಿ ದ್ರವ್ಯ ನೀಡಿದರು. ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರಿಗೆ 1917ರಲ್ಲಿ ಅವರ ಪರಿಚಯ ಆಯಿತು.

ಅವರು ಅಂಬೇಡ್ಕರ್ ಅವರಿಗೆ 'ಮೂಕನಾಯಕ' ಪಾಕ್ಷಿಕವನ್ನು ನಡೆಸುವುದಕ್ಕಾಗಿ ಎರಡೂವರೆ ಸಾವಿರದ ಚೆಕ್ ಕೊಟ್ಟರು ಮತ್ತು ಈ ಪಾಕ್ಷಿಕವನ್ನು 31 ಜನವರಿ 1920ರಿಂದ ಆರಂಭಿಸಿದರು.

ಡಾ. ಅಂಬೇಡ್ಕರರು ಮಾಡುತ್ತಿದ್ದ ಸಮಾಜೋನ್ನತಿಯ ಕೆಲಸದ ಸಲುವಾಗಿ ಮಾಣ್ ಗಾವ್‌ನಲ್ಲಿ 21/22 ಮಾರ್ಚ್ 1920ರ ಪರಿಷತ್ತಿನಲ್ಲಿ ತಮ್ಮ ಭಾವನೆಯನ್ನು ವ್ಯಕ್ತಪಡಿಸುತ್ತಾ ಶಾಹೂ ಮಹಾರಾಜ ಹೀಗೆ ಹೇಳುತ್ತಾರೆ. ''ನನ್ನ ರಾಜ್ಯದಲ್ಲಿರುವ ಬಹಿಷ್ಕೃತ ಪ್ರಜಾ ಜನರೇ, ನೀವು ನಿಮ್ಮ ನಿಜವಾದ ಮುಂದಾಳುವನ್ನು ಹುಡುಕಿ ತೆಗೆದಿದ್ದೀರಿ, ಇದರ ಸಲುವಾಗಿ ನಾನು ನಿಮ್ಮನ್ನು ಅಂತಃಪೂರ್ವಕವಾಗಿ ಅಭಿನಂದಿಸುತ್ತೇನೆ. ಡಾ. ಅಂಬೇಡ್ಕರ್ ಅವರು ನಿಮ್ಮ ಉದ್ಧಾರ ಮಾಡುವ ತನಕ ಬಿಡುವುದಿಲ್ಲ ಎನ್ನುವ ಖಾತ್ರಿ ನನಗಿದೆ. ಇಷ್ಟೇ ಅಲ್ಲ ಅವರು ಸರ್ವ ಹಿಂದೂಸ್ಥಾನದ ಮುಂದಾಳುವಾಗುವ ಒಂದು ಸಮಯ ಬರುತ್ತದೆ ಎಂದು ನನ್ನ ಮನೋದೇವತೆ ನನಗೆ ಹೇಳುತ್ತಿದ್ದಾಳೆ.''

ಸ್ತ್ರೀಯರನ್ನು ಕ್ರೂರವಾಗಿ ನಡೆಸಿಕೊಳ್ಳಬಾರದು ಎಂದು ಅವರು ಕಾಯ್ದೆ ಮಾಡಿದರು. ಅದರಲ್ಲಿ ''The kolhapur state divorce act of 1919'' ಪ್ರಮುಖವಾಗಿತ್ತು. ಒಂದು ವೇಳೆ ಅಸ್ಪಶ್ಯರನ್ನು ಸಮಾನತೆಯಲ್ಲಿ ನಡೆಸಿಕೊಳ್ಳದಿದ್ದರೆ, ಪ್ರಿನ್ಸಿಪಾಲರು ಕೀಳು ವರ್ಗದ ಶಿಕ್ಷಕನಿದ್ದರೆ ಅವನಿಗೆ ಉತ್ತರ ಕೊಡದಿದ್ದರೆ ಆ ಖಾಸಗಿ ಸಂಸ್ಥೆಗೆ ಯಾವ ಸಹಾಯ ಸಿಗುತ್ತದೋ ಅದನ್ನು ಹಿಂದೆ ತೆಗೆದು ಕೊಳ್ಳಲಾಗುವುದು ಎನ್ನುವ ಆದೇಶ ತಾ. 23 ಆಗಸ್ಟ್ 1919ರಂದು ಜಾರಿ ಮಾಡಿದರು.

'ಮಾನವ ಜೀವನದ ವಿಷಯದಲ್ಲಿ ಅತ್ಯಂತ ಸಹಾನುಭೂತಿ' ಇದು ಶಾಹೂವಿನ ದೃಢವಾಕ್ಯವಾಗಿತ್ತು. ಶಾಹು ಅವರು ತಮ್ಮ ದಿವ್ಯ ಚಕ್ಷುಗಳಿಂದ ಸ್ವಾತಂತ್ರ, ಸಮಾನತೆ, ಬಂಧುತ್ವ ಮತ್ತು ಬುದ್ಧಿ ಪ್ರಾಮಾಣ್ಯ ಇದರ ಮೇಲೆ ನಿಂತಿರುವ ಒಂದು ಹೊಸ ಪ್ರಕಾರದ ಸಮಾಜರಚನೆ ಭಾರತದಲ್ಲಿ ಸ್ಥಾಪನೆಯಾಗುತ್ತದೆ ಎನ್ನುವ ದೃಶ್ಯವನ್ನು ಕಂಡರು. ಕೆಲಸಗಾರರಿಗೆ ಅಧಿಕಾರ ಪ್ರಾಪ್ತಿಯಾಗಬೇಕು, ಅಸ್ಪಶ್ಯತೆಯ ನಿರ್ಮೂಲನವಾಗಬೇಕು, ಸಾಮಾನ್ಯ ಮನುಷ್ಯನ ಐಹಿಕ ದರ್ಜೆ ಹೆಚ್ಚಬೇಕು ಎಂಬ ಅವರ ತತ್ವಜ್ಞಾನ ಭಾರತದ ರಾಜ್ಯ ಘಟನೆಗಳು ಮಾರ್ಗದರ್ಶಕ ತತ್ವದೊಡನೆ ಬೇರೆಯಾಗದಂತೆ ಸೇರಿಸಲಾಗಿದೆ.

ಮಹಾರಾಜರು ದಿನಾಂಕ 3 ಮೇ 1922ರಂದು ಮುಂಬೈಯಲ್ಲಿ ಪನ್ಹಾಳಾ ಲಾಡ್ಜ್, ಖೇತವಾಡಿಯಲ್ಲಿ ಅಕಾಲಮೃತ್ಯುವಿಗೆ ತುತ್ತಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News