ನೀರವ್ ಮೋದಿಗೆ ಇಂಟರ್‌ಪೋಲ್‌ ನಿಂದ ರೆಡ್‌ ಕಾರ್ನರ್‌ ನೋಟಿಸ್‌

Update: 2018-07-02 04:51 GMT

ಹೊಸದಿಲ್ಲಿ, ಜು.2: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ (ಪಿಎನ್‌ಬಿ) 13 ಸಾವಿರ ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಗುಜರಾತ್ ನ

ವಜ್ರದ ವ್ಯಾಪಾರಿ ನೀರವ್‌ ಮೋದಿ ವಿರುದ್ಧ ಇಂಟರ್‌ಪೋಲ್‌ ರೆಡ್‌ ಕಾರ್ನರ್‌ ನೋಟಿಸ್‌  ಜಾರಿ ಮಾಡಿದೆ.

ವಿದೇಶದಲ್ಲಿ  ತಲೆಮರೆಸಿಕೊಂಡಿರುವ ನೀರವ್ ಮೋದಿ ಬಂಧನಕ್ಕೆ ರೆಡ್‌ ಕಾರ್ನರ್‌ ನೋಟಿಸ್  ಜಾರಿಮಾಡುವಂತೆ  ಇಂಟರ್‌ಪೋಲ್‌ಗೆ ಸಿಬಿಐ ಇತ್ತೀಚೆಗೆ ಪತ್ರ ಬರೆದಿತ್ತು. ಅದರಂತೆ  ಅಂತರ್ ರಾಷ್ಟ್ರೀಯ ಪೊಲೀಸ್‌ ಸಂಸ್ಥೆ (ಇಂಟರ್‌ಪೋಲ್‌) ನೀರವ್‌ ಮೋದಿಗೆ  ರೆಡ್‌ ಕಾರ್ನರ್‌ ನೋಟಿಸ್ ನೀಡಿದೆ   ಎಂದು ತಿಳಿದು ಬಂದಿದೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ   ವಂಚಿಸಿ ಪರಾರಿಯಾಗಿರುವ ನೀರವ್‌ ಮೋದಿ ವಿರುದ್ಧ ಸಿಬಿಐ ಅಧಿಕಾರಿಗಳು ಮೇ 15ರಂದು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

(ಚಿತ್ರ ಕೃಪೆ : ANI)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News