ಇರಾನ್ ಸಂಸತ್ ಮೇಲೆ ದಾಳಿ; 8 ಐಸಿಸ್ ಉಗ್ರರಿಗೆ ಗಲ್ಲು

Update: 2018-07-07 17:34 GMT

 ಟೆಹರಾನ್ (ಇರಾನ್), ಜು. 7: ಟೆಹರಾನ್‌ನಲ್ಲಿ ಸಂಸತ್ತು ಮತ್ತು ಆಯತುಲ್ಲಾ ರೂಹುಲ್ಲಾ ಖೊಮೈನಿ ಪ್ರಾರ್ಥನಾಲಯದ ಮೇಲೆ 2017ರಲ್ಲಿ ನಡೆದ ದಾಳಿಗೆ ಸಂಬಂಧಿಸಿ ತಪ್ಪಿತಸ್ಥರೆಂದು ಸಾಬೀತಾದ 8 ಮಂದಿಯನ್ನು ಗಲ್ಲಿಗೇರಿಸಿರುವುದಾಗಿ ಇರಾನ್ ಶನಿವಾರ ಹೇಳಿದೆ.

ಐಸಿಸ್ ಉಗ್ರರು 2017 ಜೂನ್ 7ರಂದು ಈ ದಾಳಿ ನಡೆಸಿದ್ದರು.

ಆದರೆ, ಅವರನ್ನು ಯಾವಾಗ ಗಲ್ಲಿಗೇರಿಸಲಾಗಿದೆ ಎಂಬ ಮಾಹಿತಿಯನ್ನು ನ್ಯಾಯಾಂಗದ ಅಧಿಕೃತ ಸುದ್ದಿ ಸಂಸ್ಥೆ ಮೈಝನ್ ಒದಗಿಸಿಲ್ಲ.

ಪ್ರತ್ಯಕ್ಷದರ್ಶಿಗಳ ಹೇಳಿಕೆ ಮತ್ತು ವೀಡಿಯೊ ತುಣುಕುಗಳ ಆಧಾರದಲ್ಲಿ ಈ ವ್ಯಕ್ತಿಗಳನ್ನು ದೋಷಿಗಳೆಂದು ನಿರ್ಧರಿಸಲಾಗಿದೆ ಎಂದು ಮೈಝನ್ ತನ್ನ ವರದಿಯಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News