ಥಾಯ್ ಗುಹೆಯೊಳಗೆ ಸಿಲುಕಿದ್ದ 11ನೆ ಬಾಲಕನ ರಕ್ಷಣೆ

Update: 2018-07-10 11:08 GMT

ಬ್ಯಾಂಕಾಕ್, ಜು.10: ಎರಡು ವಾರಗಳ ಹಿಂದೆ ಥಾಯ್ ಗುಹೆಯಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯ ಮಂಗಳವಾರವೂ ಮುಂದುವರಿದಿದ್ದು, 11ನೆ ಬಾಲಕನನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ. ಇನ್ನು ಕೋಚ್ ಸೇರಿದಂತೆ ಮತ್ತೊಬ್ಬ ಬಾಲಕನ ರಕ್ಷಣೆ ಮಾತ್ರವೇ ಬಾಕಿಯಿದೆ.

ಥಾಮ್ ಲುವಾಂಗ್ ಗುಹೆಯಿಂದ ಇಬ್ಬರನ್ನು ಸ್ಟ್ರೆಚರ್ ನಲ್ಲಿ ಕರೆತಂದಿದ್ದಾರೆ ಎನ್ನಲಾಗಿದೆ. ಮೊದಲ ಎರಡು ದಿನಗಳಲ್ಲಿ 8 ಬಾಲಕರನ್ನು ಗುಹೆಯಿಂದ ಹೊರಕ್ಕೆ ತರಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News