ಯೋಗದ ಮೊರೆ ಹೋದ ಹೈಕೋರ್ಟ್ ನ್ಯಾಯಮೂರ್ತಿಗಳು

Update: 2018-07-15 16:08 GMT

ಬೆಂಗಳೂರು, ಜು.15: ಪ್ರತಿಯೊಂದು ನಿಮಿಷವೂ ಅಮೂಲ್ಯ ಎಂಬ ಮಾತಿಗೆ ಕಟಿಬದ್ಧವಾಗಿ ಕರ್ತವ್ಯ ನಿರ್ವಹಿಸಬೇಕಾದ ಹೈಕೋರ್ಟ್ ನ್ಯಾಯಮೂರ್ತಿಗಳು ತಮ್ಮ ಒತ್ತಡವನ್ನು ನಿರಾಳಗೊಳಿಸಲು ಯೋಗದ ಮೊರೆ ಹೋಗಿದ್ದಾರೆ.

ಹೈಕೋರ್ಟ್‌ನ ಪೇಟರ್ನ್ ಇನ್ ಚೀಫ್ ಸಭಾಂಗಣದಲ್ಲಿ ಪ್ರತಿದಿನ ಸಂಜೆ 5 ರಿಂದ 6ಗಂಟೆಯವರೆಗೆ ಹತ್ತಕ್ಕೂ ಹೆಚ್ಚು ನ್ಯಾಯುೂರ್ತಿಗಳು ಯೋಗ ಕಲಿಯುತ್ತಿದ್ದಾರೆ.

ಬೆಂಗಳೂರಿನ ಪರಿವರ್ತನ ಯೋಗ ಪ್ರತಿಷ್ಠಾನದ ನಿರ್ದೇಶಕ ಎಸ್.ಪ್ರಸಾದ್ ನ್ಯಾಯಮೂರ್ತಿಗಳಿಗೆ ಯೋಗ ಕಲಿಸುತ್ತಿದ್ದಾರೆ. ಪ್ರಸಾದ್ ಹೇಳುವಂತೆ ನ್ಯಾಯಮೂರ್ತಿಗಳು ಬಹಳಷ್ಟು ಹೊತ್ತು ಕುಳಿತೇ ಇರುತ್ತಾರಾದ್ದರಿಂದ ಅವರಿಗೆ ಬೆನ್ನು ನೋವು, ಕುತ್ತಿಗೆ ನರಗಳಿಗೆ ಸಂಬಂಧಿಸಿದ ಆಸನಗಳನ್ನು ಕಲಿಸಲಾಗುತ್ತಿದೆ ಎಂದರು.

ಈಗ ಪುರುಷ ನ್ಯಾಯಮೂರ್ತಿಗಳು ಮಾತ್ರವೇ ಬರುತ್ತಿದ್ದಾರೆ. ನಮ್ಮ ತಂಡದಲ್ಲಿ ಮಹಿಳಾ ಯೋಗ ಗುರುಗಳೂ ಇದ್ದು ಮಹಿಳಾ ನ್ಯಾಯಮೂರ್ತಿಗಳು ಬಂದರೆ ಅವರಿಗೂ ತರಬೇತಿ ನೀಡಲಾಗುತ್ತದೆ ಎಂದು ಹೇಳಿದರು.

ಸದ್ಯ 8ರಿಂದ 10 ನ್ಯಾಯಮೂರ್ತಿಗಳು ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಓದುವ, ಬರೆಯುವ ಕ್ರಿಯೆಗಳಲ್ಲಿ ನಿರತರಾಗುವ ಅವರಿಗೆ ಒತ್ತಡ ನಿವಾರಣೆ ಮಾಡುವ ದಿಸೆಯಲ್ಲಿ ಪ್ರಾಣಾಯಾಮ, ಧ್ಯಾನದ ಆಸನಗಳನ್ನು ಹೇಳಿಕೊಡಲಾಗುತ್ತಿದೆ ಎಂದು ಪ್ರಸಾದ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News