ಶರೀಫ್‌ಗೆ ಜೈಲಿನಲ್ಲಿ ಕಳಪೆ ಸೌಲಭ್ಯ: ವಕೀಲರ ಆರೋಪ

Update: 2018-07-15 18:17 GMT

ಇಸ್ಲಾಮಾಬಾದ್, ಜು. 15: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್ ಮತ್ತು ಅವರ ಪುತ್ರಿ ಮರ್ಯಮ್ ನವಾಝ್‌ರನ್ನು ಜೈಲಿನಲ್ಲಿ ಕಳಪೆ ದರ್ಜೆಯ ಸೆಲ್‌ಗಳಲ್ಲಿ ಇಡಲಾಗಿದೆ ಎಂದು ಅವರ ವಕೀಲರು ಆರೋಪಿಸಿದ್ದಾರೆ.

ತಮಗೆ ಶರೀಫ್‌ರನ್ನು ಕೇವಲ ಐದು ನಿಮಿಷಗಳ ಅವಧಿಗೆ ಭೇಟಿ ಮಾಡಲು ಅವಕಾಶ ನೀಡಲಾಗಿದೆ ಎಂದು ಅವರ ವಕೀಲರ ತಂಡ ಹೇಳಿದೆ.

ಶುಕ್ರವಾರ ರಾತ್ರಿ ಪಾಕಿಸ್ತಾನಕ್ಕೆ ಮರಳಿದ ಶರೀಫ್ ಮತ್ತು ಅವರ ಪುತ್ರಿಯನ್ನು ಲಾಹೋರ್ ವಿಮಾನ ನಿಲ್ದಾಣದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದರು.

ಭ್ರಷ್ಟಾಚಾರ ಪ್ರಕರಣವೊಂದರಲ್ಲಿ, ಸುಪ್ರೀಂ ಕೋರ್ಟ್ ಶರೀಫ್‌ಗೆ 10 ವರ್ಷ ಮತ್ತು ಮರ್ಯಮ್‌ಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿರುವುದನ್ನು ಸ್ಮರಿಸಬಹುದಾಗಿದೆ.

ಮಾಜಿ ಪ್ರಧಾನಿಗೆ ಅಡಿಯಾಲ ಕೇಂದ್ರೀಯ ಜೈಲಿನಲ್ಲಿ ಯಾವುದೇ ಹಾಸಿಗೆ ಅಥವಾ ವಾತಾನುಕೂಲಿ ವ್ಯವಸ್ಥೆ ಒದಗಿಸದಿರುವುದನ್ನು, ಸಅದ್ ಹಾಶ್ಮಿ ನೇತೃತ್ವದ ವಕೀಲರ ತಂಡ ಅವರ ಜೈಲು ಕೋಣೆಗೆ ಹೋದಾಗ ಗಮನಿಸಿತು ಎಂದು ವಕೀಲರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News