ಶೇಕಡ 25ರಷ್ಟು ಸರಕಾರಿ ಸ್ವಾಮ್ಯದ ಬ್ಯಾಂಕ್ ಎಟಿಎಂಗಳಲ್ಲಿ ವಂಚನೆ ಸಾಧ್ಯತೆ!

Update: 2018-07-21 09:19 GMT

ಹೊಸದಿಲ್ಲಿ, ಜು.21: ಸರ್ಕಾರಿ ಸ್ವಾಮ್ಯದ ಬ್ಯಾಂಕ್‍ಗಳ ಶೇಕಡ 25ರಷ್ಟು ಎಟಿಎಂಗಳು ಹಳೆಯ ಸಾಫ್ಟ್‍ವೇರ್‍ ಗಳನ್ನು ಹೊಂದಿದ್ದು, ಇವುಗಳು ವಂಚನೆಗೆ ಒಳಗಾಗುವ ಸಾಧ್ಯತೆ ಅಧಿಕ ಎಂದು ಸರಕಾರ ಶುಕ್ರವಾರ ಸುಳಿವು ನೀಡಿದೆ.

ತೀರಾ ಹಳೆಯ ಹಾಗೂ ಅಪ್ರಸ್ತುತವಾದ ಸಾಫ್ಟ್‍ವೇರ್, ಸರ್ಕಾರಿ ಸ್ವಾಮ್ಯದ ಬ್ಯಾಂಕ್‍ಗಳಲ್ಲಿ ಬಳಕೆಯಾಗುತ್ತಿರುವ ಬಗ್ಗೆ ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗೆ ಸರ್ಕಾರ ಈ ಉತ್ತರ ನೀಡಿದೆ. ಈ ಎಟಿಎಂಗಳಲ್ಲಿ ಮೂಲ ಭದ್ರತಾ ಲಕ್ಷಣಗಳೂ ಇಲ್ಲದಿರುವುದರಿಂದ ವಂಚನೆ ಸಾಧ್ಯತೆಗಳು ಅಧಿಕ. ಆದರೆ ಖಾಸಗಿ ವಲಯದ ಬ್ಯಾಂಕ್‍ಗಳ ಎಟಿಎಂ ಬಗೆಗಿನ ವಿವರಗಳನ್ನು ಸರ್ಕಾರ ಬಹಿರಂಗಪಡಿಸಿಲ್ಲ.

ಬಹುತೇಕ ಎಟಿಎಂಗಳು ಸರ್ಕಾರಿ ಸ್ವಾಮ್ಯದ ಬ್ಯಾಂಕ್‍ಗಳಿಂದ ನಿರ್ವಹಿಸಲ್ಪಡುತ್ತಿದ್ದು, ಶೇಕಡ 89ರಷ್ಟು ಎಟಿಎಂಗಳು ಈ ವರ್ಗದಲ್ಲಿ ಸೇರುತ್ತವೆ ಎಂದು ಸ್ಪಷ್ಟಪಡಿಸಿದೆ. ಇತ್ತೀಚಿನ ವರ್ಷಗಳಲ್ಲಿ ಖಾಸಗಿ ವಲಯದ ಅಸ್ತಿತ್ವ ಹೆಚ್ಚುತ್ತಿದ್ದರೂ, ಒಟ್ಟು ಬ್ಯಾಂಕಿಂಗ್ ವಹಿವಾಟಿನ ಶೇಕಡ 70ರಷ್ಟು ವ್ಯವಹಾರವನ್ನು ಸರ್ಕಾರಿ ಬ್ಯಾಂಕ್‍ಗಳೇ ನಿರ್ವಹಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News