ಬೆಂಗಳೂರು: ಅನಧಿಕೃತ ಶೆಡ್‌ಗಳ ತೆರವು

Update: 2018-07-22 15:48 GMT

ಬೆಂಗಳೂರು, ಜು.22: ನಗರ ವ್ಯಾಪ್ತಿಯಲ್ಲಿದ್ದ ಅನಧಿಕೃತ ಶೆಡ್‌ಗಳ ತೆರವು ಕಾರ್ಯಾಚರಣೆ ರವಿವಾರ ನಡೆಯಿತು.

ರಾಜ್ಯ ಕೊಳಚೆ ಅಭಿವೃದ್ಧಿ ಮಂಡಳಿ ಅಧಿಕಾರಿಗಳು, ಮೂರು ಜೆಸಿಬಿಗಳ ಮೂಲಕ ನಗರದ ನಂದಿನಿ ಲೇಔಟ್‌ನಲ್ಲಿದ್ದ ಸುಮಾರು 50ಕ್ಕೂ ಹೆಚ್ಚು ಶೆಡ್ ಗಳನ್ನು ತೆರವು ಮಾಡಲಾಯಿತು.

ಸ್ಥಳೀಯ ಬಡ ನಿವಾಸಿಗಳಿಗೆ ಕೊಳಚೆ ಅಭಿವೃದ್ಧಿ ಮಂಡಳಿಯಿಂದ ನಿವೇಶನ ಹಂಚಿಕೆ ಮಾಡಲಾಗಿತ್ತು. ಆದರೂ, ನಿವಾಸಗಳು ಶೆಡ್‌ಗಳನ್ನು ಖಾಲಿ ಮಾಡಿರಲಿಲ್ಲ. ಹೀಗಾಗಿ, ಅಧಿಕಾರಿಗಳು ಶೆಡ್ ತೆರವುಗೊಳಿಸಿದರು.

ಬಿಗಿ ಬಂದೋಬಸ್ತ್: ಅಧಿಕಾರಿಗಳು, ಅನಧಿಕೃತ ಶೆಡ್‌ಗಳನ್ನು ತೆರವುಗೊಳಿಸಲು ಮುಂದಾದ ವೇಳೆ, ಸ್ಥಳೀಯ ನಿವಾಸಿಗಳು, ವಿರೋಧ ವ್ಯಕ್ತಪಡಿಸಿದರು. ಬಳಿಕ ಹಿರಿಯ ಪೊಲೀಸರು ನಿವಾಸಿಗಳೊಂದಿಗೆ ಸಂಧಾನ ಮಾಡಿ, ತೆರವು ಕಾರ್ಯಾಚರಣೆಗೆ ಅನುವು ಮಾಡಿಕೊಡುವಂತೆ ಕೋರಿದರು.

ಸ್ಥಳಕ್ಕೆ ಶಾಸಕ ಗೋಪಾಲಯ್ಯ, ಪಾಲಿಕೆ ಸದಸ್ಯರು ಭೇಟಿ ನೀಡಿ ಶೆಡ್‌ಗಳ ತೆರವು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದರು. ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರಿಗೆ ವರದಿ ನೀಡಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇಲ್ಲಿನ ಸ್ಥಳೀಯ ನಿವಾಸಿಗಳಿಗೆ ಸೂಕ್ತ ಸೌಕರ್ಯ ದೊರೆತ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಗೋಪಾಲಯ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News