ಆರ್‌ಟಿಐ ಕಾಯ್ದೆಗೆ ತಿದ್ದುಪಡಿ: ಕೇಂದ್ರ ಮಾಹಿತಿ ಆಯೋಗದಲ್ಲಿ ಅಸಮಾಧಾನ

Update: 2018-07-22 17:53 GMT

ಹೊಸದಿಲ್ಲಿ, ಜು. 22: ಆರ್‌ಟಿಐ ಕಾಯ್ದೆಯಲ್ಲಿ ಪ್ರಸ್ತಾವಿತ ತಿದ್ದುಪಡಿ ವಿರುದ್ಧ ಕೇಂದ್ರ ಮಾಹಿತಿ ಆಯೋಗದ ಒಳಗೆ ಅಸಮಾಧಾನದ ಧ್ವನಿ ಹೊರಹೊಮ್ಮಿದೆ. ಈ ತಿದ್ದುಪಡಿ ಮಾಹಿತಿ ಆಯುಕ್ತರೊಂದಿಗೆ ಮಾಹಿತಿ ಆಯೋಗವನ್ನು ದುರ್ಬಲಗೊಳಿಸುತ್ತದೆ. ಆದುದರಿಂದ ಈ ವಿವಾದಾತ್ಮಕ ತಿದ್ದುಪಡಿ ಮಸೂದೆಯನ್ನು ಹಿಂದೆಗೆಯುವಂತೆ ಆಯೋಗ ಕೇಂದ್ರ ಸರಕಾರವನ್ನು ವಿನಂತಿಸಿತ್ತು.

 ಈ ವಿಷಯದ ಕುರಿತು ಎಲ್ಲ ಮಾಹಿತಿ ಆಯುಕ್ತರ ಸಭೆ ಆಯೋಜಿಸುವಂತೆ ರಜೆಯಲ್ಲಿರುವ ಮುಖ್ಯ ಮಾಹಿತಿ ಆಯುಕ್ತ ಆರ್.ಕೆ. ಮಾಥುರ್ ಅವರ ಪರವಾಗಿ ಮಾಹಿತಿ ಆಯುಕ್ತ ಶ್ರೀಧರ್ ಆಚಾರ್ಯುಲು ಜುಲೈ 19ರಂದು ಹಿರಿಯ ಆಯುಕ್ತ ಯಶೋವರ್ಧನ್ ಅಜಾದ್ ಅವರಿಗೆ ಪತ್ರ ಬರೆದಿದ್ದರು. ಫೆಡರಲ್ ವಾದ ಮೂಲ ಲಕ್ಷಣವಾಗುಳ್ಳ ಭಾರತೀಯ ಸಂವಿಧಾನವನ್ನು ನಿರ್ಲಕ್ಷಿಸುವುದಲ್ಲದೆ, ಆರ್‌ಟಿಐ ಕಾಯ್ದೆ 2005ರ ಉದ್ದೇಶವನ್ನು ವಿಫಲಗೊಳಿಸುವ ಉದ್ದೇಶವನ್ನು ಪ್ರಸ್ತಾವಿತ ತಿದ್ದುಪಡಿ ಹೊಂದಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News