‘ತಪ್ಪೊಪ್ಪಿಗೆ’ ಮಹಿಳೆಯರನ್ನು ಶೋಷಿಸುತ್ತದೆ: ರಾಷ್ಟ್ರೀಯ ಮಹಿಳಾ ಆಯೋಗ

Update: 2018-07-27 18:34 GMT

ತಿರುವನಂತಪುರ, ಜು. 27: ಕ್ರೆಸ್ತ ಪಾದ್ರಿಗಳಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯರನ್ನು ಭೇಟಿಯಾಗಲು ಕೇರಳಕ್ಕೆ ಆಗಮಿಸಿರುವ ರಾಷ್ಟ್ರೀಯ ಮಹಿಳಾ ಆಯೋಗದ ವರಿಷ್ಠೆ ರೇಖಾ ಶರ್ಮಾ, ಚರ್ಚ್‌ನ ತಪ್ಪೊಪ್ಪಿಗೆಯನ್ನು ಭಕ್ತರನ್ನು, ವಿಶೇಷವಾಗಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗಲು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ನನಗೆ ಹಲವರು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

ಪಾದ್ರಿಗಳು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಧಾರ್ಮಿಕ ಆಚರಣೆಯಾದ ‘ಧಾರ್ಮಿಕ ತಪ್ಪೊಪ್ಪಿಗೆ’ಯನ್ನು ರದ್ದುಗೊಳಿಸುವ ರೇಖಾ ಶರ್ಮಾ ಅವರ ಆಗ್ರಹವನ್ನು ಕೇರಳದಲ್ಲಿರುವ ಚರ್ಚ್‌ಗಳು ಕಟುವಾಗಿ ಟೀಕಿಸಿವೆ. ಅಲ್ಪಸಂಖ್ಯಾತರ ಸಾಂವಿಧಾನಿಕ ಹಕ್ಕನ್ನು ಯಾರು ಕೂಡ ಪ್ರಶ್ನಿಸಲು ಸಾಧ್ಯವಿಲ್ಲ ಹಾಗೂ ಅವರ ಧಾರ್ಮಿಕ ಸಂಪ್ರದಾಯಗಳ ಮಧ್ಯೆ ಪ್ರವೇಶಿಸುವಂತಿಲ್ಲ ಎಂದು ತಿರುವನಂತಪುರದ ಆರ್ಚ್‌ಬಿಷಪ್ ಕಾರ್ಡಿಯಲ್ ಬೆಸೆಲಿಯೋಸ್ ಕ್ಲೀಮಿಸ್ ತಿಳಿಸಿದ್ದಾರೆ.

ಕೆಲವು ಘಟನೆಗಳನ್ನು ಉಲ್ಲೇಖಿಸಿ ಸಾರ್ವತ್ರಿಕಗೊಳಿಸಲು ಸಾಧ್ಯವಿಲ್ಲ. ಅದು ಅಪರಾಧವಾಗಿದ್ದಲ್ಲಿ, ನೆಲದ ಕಾನೂನು ತಕ್ಕ ಶಿಕ್ಷೆ ನೀಡಲಿ. ನೀವು ಈ ರೀತಿ ಉಲ್ಲೇಖಿಸಿ ಧಾರ್ಮಿಕ ಸಂಪ್ರದಾಯವನ್ನು ನಿಂದಿಸಲು ಸಾಧ್ಯವಿಲ್ಲ. ಸಂವಿಧಾನ ಅಲ್ಪಸಂಖ್ಯಾತರಿಗೆ ನೀಡಿದ ಹಕ್ಕುಗಳನ್ನು ಯಾರು ಪ್ರಶ್ನಿಸಲು ಹಾಗೂ ಅವರ ಸಂಪ್ರದಾಯಗಳನ್ನು ವಿರೂಪಗೊಳಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News