ದೇಶದಲ್ಲಿ ಸಂತೋಷದ ಮಟ್ಟ ಕುಸಿತ ಕಳವಳಕಾರಿ: ಪ್ರಣಬ್ ಮುಖರ್ಜಿ

Update: 2018-07-28 10:47 GMT

ಕೊಲ್ಕತ್ತಾ, ಜು.28: ದೇಶದಲ್ಲಿ ಜಿಡಿಪಿ ಪ್ರಗತಿ ಸಾಧಿಸಿದ ಹೊರತಾಗಿಯೂ ಸಂತೋಷದ ಮಟ್ಟದಲ್ಲಿ ಹಿಂದುಳಿದಿದೆ. ವಿಶ್ವದ 2018ರ ಸಂತೋಷದ ಮಟ್ಟದ ರ್ಯಾಕಿಂಗ್ ನಲ್ಲಿ ಭಾರತ 133ನೇ ಸ್ಥಾನದಲ್ಲಿದೆ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

ದೇಶದ ಜನರ ಸರಾಸರಿ ಜೀವಿತಾವಧಿ ಸ್ವಾತಂತ್ರ್ಯಾನಂತರದ ಮೊದಲ ನಾಲ್ಕು ವರ್ಷಗಳಲ್ಲಿದ್ದ 31.4 ವರ್ಷಗಳಿಂದ ಈಗ 68 ವರ್ಷಕ್ಕೆ ಏರಿದೆ ಹಾಗೂ ಆಹಾರ ಉತ್ಪಾದನೆ ಕ್ಷೇತ್ರದಲ್ಲೂ ಗಣನೀಯ ಪ್ರಗತಿಯಾಗಿದೆ. ಆದರೆ ಕನಿಷ್ಠ ಹ್ಯಾಪಿನೆಸ್ ರ್ಯಾಂಕಿಂಗ್ (ಸಂತೋಷದ ಮಟ್ಟ) ಮಟ್ಟ ಕಳವಳಕಾರಿ'' ಎಂದು ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಸಮಾರಂಭವೊಂದರಲ್ಲಿ ಮಾತನಾಡುತ್ತಾ ಅವರು ಹೇಳಿದರು.

``ಆರ್ಥಿಕ ಚಟುವಟಿಕೆಗಳು ಕೇವಲ ಲಾಭ ಗಳಿಸುವ ಉದ್ದೇಶವೊಂದನ್ನೇ ಹೊಂದಿರಬಾರದು, ಈ ಜಗತ್ತು ಹಾಗೂ ಅಲ್ಲಿನ ಜನರ ಬಗ್ಗೆಯೂ ಯೋಚಿಸಿ  ಕೈಗಾರಿಕೆಗಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಗಮನ ಹರಿಸಬೇಕು ಎಂದು ಪ್ರಣಬ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News