ಉತ್ತರ ಪ್ರದೇಶ: ಆಶ್ರಯಧಾಮದಿಂದ 24 ಬಾಲಕಿಯರ ರಕ್ಷಣೆ; ಇಬ್ಬರ ಬಂಧನ

Update: 2018-08-06 09:57 GMT

ದಿಯೋರಿಯಾ, ಆ.6: ಇಲ್ಲಿನ ಆಶ್ರಯಧಾಮವೊಂದರಿಂದ 24 ಬಾಲಕಿಯರನ್ನು ರಕ್ಷಿಸಿರುವ ಪೊಲೀಸರು ಇದನ್ನು ನಡೆಸುತ್ತಿದ್ದ ದಂಪತಿಯನ್ನು ಬಂಧಿಸಿದ್ದಾರೆ. ಬಂಧಿತ ಇಬ್ಬರು ಆಶ್ರಯಧಾಮ ಮ್ಯಾನೇಜರ್ ಗಳು ಎಂದು ತಿಳಿದುಬಂದಿದೆ.

ಆಶ್ರಯಧಾಮದಿಂದ ತಪ್ಪಿಸಿಕೊಂಡಿದ್ದ ಬಾಲಕಿಯೊಬ್ಬಳು ಅಲ್ಲಿ ನಡೆಯುತ್ತಿದ್ದ ದೌರ್ಜನ್ಯದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ನಂತರ ದಾಳಿ ನಡೆಸಲಾಗಿತ್ತು. “ಈ ಸಂಸ್ಥೆಯನ್ನು ಮುಚ್ಚಬೇಕು ಎಂಬ ಆದೇಶದ ಪ್ರತಿಯೊಂದಿಗೆ ನಮ್ಮ ಸಿಬ್ಬಂದಿ ತೆರಳಿದ್ದಾಗ ಸಂಸ್ಥೆಯ ನಿರ್ದೇಶಕ ಅನುಚಿತವಾಗಿ ವರ್ತಿಸಿದ್ದರು. ಇಂದು ಅಲ್ಲಿಂದ ಬಾಲಕಿಯೊಬ್ಬಳು ತಪ್ಪಿಸಿಕೊಂಡು ಬಂದ ಬಳಿಕ ಅಲ್ಲಿನ ನಿಜಬಣ್ಣ ಬಯಲಾಗಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News