ಉತ್ತರ ಪ್ರದೇಶದಲ್ಲಿ ಪ್ರತಿವಾರ 32 ಬಾಲಕಿಯರು ನಾಪತ್ತೆ!: ಕಳ್ಳಸಾಗಣೆಯ ಶಂಕೆ

Update: 2018-08-08 14:17 GMT

ಲಕ್ನೋ, ಆ.8: ಉತ್ತರ ಪ್ರದೇಶದಲ್ಲಿ 2017ರಲ್ಲಿ ಪ್ರತಿ ವಾರ 32 ಬಾಲಕಿಯರು ನಾಪತ್ತೆಯಾಗಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ರಾಜ್ಯ ಅಪರಾಧ ದಾಖಲೆ ಬ್ಯೂರೋ ಬಹಿರಂಗಪಡಿಸಿದೆ. ನಾಪತ್ತೆಯಾದ ಮಕ್ಕಳ ಬಗ್ಗೆ ಮಾಹಿತಿ ಕೋರಿ ಸಲ್ಲಿಸಿದ್ದ ಆರ್ ಟಿಐ ಅರ್ಜಿಯಿಂದ ಈ ಮಾಹಿತಿ ಬಹಿರಂಗಗೊಂಡಿದೆ.

ನಾಪತ್ತೆಯಾಗಿರುವ ಹಲವು ಬಾಲಕಿಯರನ್ನು ಕಳ್ಳಸಾಗಣೆ ಮಾಡಲಾಗಿದೆ ಎಂದು ಮಕ್ಕಳ ಹಕ್ಕುಗಳ ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿದ್ದಾರೆ. “2017ರಲ್ಲಿ 75 ಜಿಲ್ಲೆಗಳಲ್ಲಿ 1675 ಬಾಲಕಿಯರು ನಾಪತ್ತೆಯಾಗಿದ್ದಾರೆ ಎಂದು ದಾಖಲೆಗಳು ತಿಳಿಸುತ್ತವೆ” ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಉಮೇಶ್ ಕುಮಾರ್ ಗುಪ್ತಾ ಮಾಹತಿ ನೀಡಿದ್ದಾರೆ.

“2018 ಮೊದಲ ಮೂರು ತಿಂಗಳಲ್ಲಿ 435 ಬಾಲಕಿಯರು ನಾಪತ್ತೆಯಾಗಿದ್ದಾರೆ” ಎಂದು ಆರ್ ಟಿಐ ಮಾಹಿತಿಯನ್ನುದ್ದೇಶಿಸಿ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News