ಎಸಿಬಿ ದಾಳಿ: ಅಧೀಕ್ಷಕನ ಬಳಿ ಕೋಟ್ಯಂತರ ಆಸ್ತಿ ಪತ್ತೆ

Update: 2018-08-08 14:59 GMT

ಬೆಂಗಳೂರು, ಆ.8: ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದನೆ ಆರೋಪ ಕೇಳಿಬಂದ ಹಿನ್ನಲೆ ತುರುವೆಕೆರೆ ಹೇಮಾವತಿ ನಾಲಾ ವಲಯ ಅಧೀಕ್ಷಕ ಅಭಿಯಂತರ ಎಚ್.ಶಿವಕುಮಾರ್ ಮನೆ, ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿದ ಪ್ರಕರಣ ಸಂಬಂಧ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.

ಆ.7ರಂದು ಎಸಿಬಿ ತನಿಖಾಧಿಕಾರಿಗಳು ಶಿವಕುಮಾರ್ ಅವರ ಕುಟುಂಬಸ್ಥರು ವಾಸವಿರುವ ಜಯನಗರ ಪೂರ್ವ, ತುಮಕೂರು ಹಾಗೂ ಇವರ ತಂದೆ ವಾಸವಿರುವ ಎಸ್‌ಐಟಿ ಎಕ್ಸ್‌ಟೆನ್ಷನ್, ತುಮಕೂರಿನ ಮನೆಗಳ ಮೇಲೆ ದಾಳಿನಡೆಸಿದ್ದರು.

ತನಿಖೆ ವೇಳೆ ತುಮಕೂರು ನಗರ ವ್ಯಾಪ್ತಿಯಲ್ಲಿ 2 ಮನೆ, 2 ನಿವೇಶನ, ಕೌತಮಾರನಹಳ್ಳಿಯ ವಿವಿಧ ಸರ್ವೆ ಸಂಖ್ಯೆಗಳಲ್ಲಿ ಒಟ್ಟು 3.2 ಎಕರೆ ಕೃಷಿ ಭೂಮಿ, 2.413 ಕೆಜಿ ಚಿನ್ನ, 15 ಕೆಜಿ ಬೆಳ್ಳಿ, 1 ಟ್ರ್ಯಾಕ್ಟರ್, 2 ಕಾರು, 3 ಬೈಕ್ 1.74 ಲಕ್ಷ ನಗದು, ಬ್ಯಾಂಕ್ ಖಾತೆಯಲ್ಲಿ 11.72 ಲಕ್ಷ ಠೇವಣಿ ಹಾಗೂ 15.31 ಲಕ್ಷ ಗೃಹೋಪಯೋಗಿ ವಸ್ತುಗಳು ಕಂಡು ಬಂದಿರುತ್ತದೆ ಎಂದು ಎಸಿಬಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News