ಕರ್ನಾಟಕ ಮುಕ್ತ ವಿವಿಗೆ ಯುಜಿಸಿ ಮ್ಯಾನತೆ

Update: 2018-08-10 05:26 GMT

ಬೆಂಗಳೂರು, ಆ.10:  ಕರ್ನಾಟಕ ಮುಕ್ತ ವಿಶ್ವವಿದ್ಯಾಲಯಕ್ಕೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ ( ಯುಜಿಸಿ) ಮಾನ್ಯತೆ ನೀಡಿದೆ.

2018-19ರಿಂದ  2022-2023  ಸಾಲಿಗೆ ವಿವಿಧ ಕೋರ್ಸ್ ಗಳನ್ನು ನಡೆಸಲು  ಕರಾಮುವಿವಿಗೆ ಯುಜಿಸಿ ಅನುಮತಿ ನೀಡಿದೆ

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯ ಹಾಗೂ ಯುಜಿಸಿ ಇದನ್ನು ದೃಢಪಡಿಸಿದ್ದು, 2018-19 ನೇ ಸಾಲಿನ ಶೈಕ್ಷಣಿಕ ವರ್ಷದಿಂದಲೇ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.

 ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯವು   ಕರ್ನಾಟಕ ಮುಕ್ತ ವಿಶ್ವವಿದ್ಯಾಲಯಕ್ಕೆ  ಮಾನ್ಯತೆ ನೀಡುವಂತೆ ಯುಜಿಸಿಗೆ  ಶಿಫಾರಸ್ಸು  ಮಾಡಿತ್ತು. ಅಧಿಕೃತ ಆದೇಶ ಬಂದ ಬಳಿಕ  ಪ್ರವೇಶದ ಬಗ್ಗೆ ಸಾರ್ವಜನಿಕ ಅಧಿಸೂಚನೆಯನ್ನು ವಿವಿ  ಹೊರಡಿಸಲಿದೆ.

 ರಾಜ್ಯ ಮುಕ್ತ ವಿವಿಯಲ್ಲಿ 2015-16ನೇ ಸಾಲಿನಿಂದ   ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ನೀಡಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News