ದೆಹಲಿಗೆ ಸಂಪೂರ್ಣ ರಾಜ್ಯದ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಪ್ರಧಾನಿ ಮೋದಿಗೆ 10 ಲಕ್ಷ ಪತ್ರ

Update: 2018-08-12 04:03 GMT

ಹೊಸದಿಲ್ಲಿ, ಆ. 12: ದೆಹಲಿಗೆ ಸಂಪೂರ್ಣ ರಾಜ್ಯದ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ 10 ಲಕ್ಷ ಪತ್ರಗಳನ್ನು ಸಲ್ಲಿಸಲು ಆಮ್ ಆದ್ಮಿ ಪಕ್ಷ ನಿರ್ಧರಿಸಿದೆ.

ಈ ಪತ್ರಗಳನ್ನು ಪ್ರಧಾನಿಗೆ ಸಲ್ಲಿಸುವ ಸಲುವಾಗಿ ಪಕ್ಷದ ದೆಹಲಿ ಸಂಚಾಲಕ ಗೋಪಾಲ್ ರಾಯ್, ಪ್ರಧಾನಿಯವರ ಭೇಟಿ ಕೋರಿದ್ದಾರೆ.

"ದೆಹಲಿಗೆ ರಾಜ್ಯದ ಸ್ಥಾನಮಾನ ನೀಡುವ ಸಲುವಾಗಿ ಜನ ದಶಕಗಳಿಂದ ಆಗ್ರಹ ಮಾಡುತ್ತಲೇ ಬಂದಿದ್ದಾರೆ. ನಾನು ದೆಹಲಿಯ ನಾಗರಿಕರಿಂದ ಬಂದ 10 ಲಕ್ಷ ಪತ್ರಗಳೊಂದಿಗೆ ಆಗಸ್ಟ್ 17ರಂದು ತಮ್ಮನ್ನು ಭೇಟಿ ಮಾಡಿ ಅದನ್ನು ಸಲ್ಲಿಸಲು ಸಮಯ ಕೋರುತ್ತಿದ್ದೇನೆ" ಎಂದು ಮೋದಿಯವರಿಗೆ ಗೋಪಾಲ್ ರಾಯ್ ಪತ್ರ ಬರೆದಿದ್ದಾರೆ.

ದೆಹಲಿಗೆ ಸಂಪೂರ್ಣ ರಾಜ್ಯದ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಜುಲೈ 1ರಂದು ಪಕ್ಷ "ದಿಲ್ಲಿ ಮಾಂಗೆ ಅಪ್ನಾ ಹಕ್" ಅಭಿಯಾನವನ್ನು ಆಮ್ ಆದ್ಮಿ ಪಾರ್ಟಿ ಹಮ್ಮಿಕೊಂಡಿತ್ತು. 10 ಲಕ್ಷ ಕುಟುಂಬಗಳನ್ನು ಭೇಟಿ ಮಾಡಿ ಸಹಿ ಸಂಗ್ರಹಕ್ಕೆ ನಿರ್ಧರಿಸಿತ್ತು. ಈ ಅಭಿಯಾನದಡಿ 3000 ಆಂದೋಲನ ಕೇಂದ್ರಗಳನ್ನು ತೆರೆಯಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News