ಉತ್ತರ ಪ್ರದೇಶ: ಗಲಭೆ ಪ್ರಕರಣ ಹಿಂಪಡೆಯಲು ಮಝಫ್ಫರ್‌ನಗರ್ ಜಿಲ್ಲಾ ದಂಡಾಧಿಕಾರಿ ವಿರೋಧ

Update: 2018-08-14 04:18 GMT

ಲಕ್ನೋ, ಆ. 14: ಮುಝಫ್ಫರ್‌ನಗರ್ ಹಾಗೂ ಶಾಮ್ಲಿ ಗಲಭೆಗೆ ಸಂಬಂಧಿಸಿದ 113 ಪ್ರಕರಣಗಳನ್ನು ಹಿಂದೆ ತೆಗೆಯುವುದು ಆಡಳಿತ ಮಟ್ಟದಲ್ಲಿ ಸಲಹೆಗೆ ಅರ್ಹವಲ್ಲ ಎಂದು ಮಝಪ್ಫರ್‌ನಗರ್ ಜಿಲ್ಲಾಡಳಿತ ಸರಕಾರಕ್ಕೆ ಸಲ್ಲಿಸಿದ ತನ್ನ ವರದಿಯಲ್ಲಿ ಹೇಳಿದೆ. 2013ರಲ್ಲಿ ಸಂಭವಿಸಿದ ಗಲಭೆ ಪ್ರಕರಣಗಳಿಗೆ ಸಂಬಂಧಿಸಿದ 131 ಪ್ರಕರಣಗಳನ್ನು ಹಿಂದೆ ತೆಗೆಯಲು ಈ ವರ್ಷ ಮಾರ್ಚ್‌ನಲ್ಲಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರಕಾರ ಪ್ರಕ್ರಿಯೆ ಆರಂಭಿಸಿತ್ತು. 

‘‘ಸಾಂವಿಧಾನಿಕ ಪ್ರಕ್ರಿಯೆ ಅಡಿಯಲ್ಲಿ ಯಾರೊಬ್ಬರು ಕೂಡ ಪ್ರಕರಣ ಹಿಂದೆ ತೆಗೆದುಕೊಳ್ಳಲು ಮನವಿ ಸಲ್ಲಿಸಬಹುದು. ಈ ಅಭ್ಯಾಸವನ್ನು ಈ ಹಿಂದಿನ ಸರಕಾರ ಮಾಡಿತ್ತು. ಅದನ್ನು ಈ ಸರಕಾರ ಮುಂದುವರಿಸುತ್ತಿದೆ. ಪೊಲೀಸರು 13 ಅಂಶಗಳ ಬಗ್ಗೆ ಅಮೂಲಾಗ್ರವಾಗಿ ತನಿಖೆ ನಡೆಸಿದ ಬಳಿಕ, ಪ್ರಕರಣಗಳನ್ನು ಹಿಂದೆ ತೆಗೆದುಕೊಳ್ಳುವುದು ಆಡಳಿತ ಮಟ್ಟದಲ್ಲಿ ಸಲಹೆಗೆ ಅರ್ಹವಾದುದಲ್ಲ ಎಂದು ನಾವು ಶಿಫಾರಸು ಮಾಡಿದ್ದೇವೆ’’ ಎಂದು ಮಝಪ್ಫರ್‌ನಗರದ ಜಿಲ್ಲಾ ದಂಡಾಧಿಕಾರಿ ರಾಜೀವ್ ಶರ್ಮಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News