ಡಾಲರ್ ಎದುರು ದಾಖಲೆ ಪ್ರಮಾಣದಲ್ಲಿ ಕುಸಿದ ರೂಪಾಯಿ ಮೌಲ್ಯ!

Update: 2018-08-14 06:26 GMT

ಹೊಸದಿಲ್ಲಿ, ಆ.14: ಇಂದು ಬೆಳಗ್ಗೆ ಆರಂಭವಾದ ವಹಿವಾಟಿನಲ್ಲಿ ರೂಪಾಯಿ ಮೌಲ್ಯ ದಾಖಲೆಯ ಕುಸಿತ ಕಂಡಿದೆ. ಒಂದು ಡಾಲರ್ 70 ರೂ.ಗೆ ಸಮನಾಗಿದೆ.

ಟರ್ಕಿಯಲ್ಲಿ ಆರ್ಥಿಕ ಅಸ್ಥಿರತೆ ಉಂಟಾಗಿದ್ದು ಇದು ರೂಪಾಯಿ ಸೇರಿದಂತೆ ವಿಶ್ವದ ಎಲ್ಲ ಪ್ರಮುಖ ದೇಶಗಳ ಆರ್ಥಿಕತೆ ಮೇಲೂ ಪರಿಣಾಮ ಬೀರುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆರಂಭಿಕ ವ್ಯವಹಾರದಲ್ಲಿ ರೂಪಾಯಿಯ ವೌಲ್ಯ ಡಾಲರ್ ಎದುರು 23 ಪೈಸೆಯಷ್ಟು ಚೇತರಿಸಿಕೊಂಡಿತ್ತು. ಆದರೆ, ಬೆಳಗ್ಗೆ 10:30ರ ಸುಮಾರಿಗೆ 70.09 ರೂ.ಗೆ ಕುಸಿದಿದೆ.

ಆ.13 ರಂದು 5 ವರ್ಷಗಳಲ್ಲಿ ಮೊದಲ ಬಾರಿಗೆ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಅಂದರೆ 110 ಪೈಸೆಯಷ್ಟು ಕುಸಿದು ರೂಪಾಯಿ ಮೌಲ್ಯ 69.93 ರೂ.ಗೆ ಕುಸಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News