​ಪೂರ್ವ ಲಡಾಖ್‌ನಲ್ಲಿ 4 ಡೇರೆ ಹಾಕಿದ ಚೀನಾ

Update: 2018-08-15 03:50 GMT

ಹೊಸದಿಲ್ಲಿ, ಆ.15: ಪೂರ್ವ ಲಡಾಖ್‌ನ ಡೆಮ್‌ಚೋಕ್ ಪ್ರದೇಶದಲ್ಲಿ ಸುಮಾರು 300 ಮೀಟರ್‌ನಷ್ಟು ಅತಿಕ್ರಮಣ ಮಾಡಿರುವ ಚೀನಾ ಸೇನಾ ಸಿಬ್ಬಂದಿ ಆ ಪ್ರದೇಶದಲ್ಲಿ ನಾಲ್ಕು ಡೇರೆಗಳನ್ನು ಹಾಕಿವೆ ಎಂದು ಅಧಿಕೃತ ಮೂಲಗಳು ಹೇಳಿವೆ.

ಭಾರತದ ಗಡಿ ಒತ್ತರಿಸಿಕೊಂಡು ಬಂದಿರುವ ಚೀನಾ ಸೇನೆ ಡೇರೆಗಳನ್ನು ಹಾಕಿದೆ. ಜುಲೈ ಮೊದಲ ವಾರದಲ್ಲಿ ಈ ಅತಿಕ್ರಮಣ ನಡೆದಿದ್ದು, ಸ್ಥಳೀಯ ಕಮಾಂಡರ್ ಜತೆ ಭಾರತದ ಅಧಿಕಾರಿಗಳು ಚರ್ಚಿಸಿದ ಬಳಿಕ ಐದು ಡೇರೆಗಳ ಪೈಕಿ ನಾಲ್ಕನ್ನು ಚೀನಾ ಸೇನೆ ತೆರವುಗೊಳಿಸಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಇಂಥ ಅತಿಕ್ರಮಣ ವಿಶೇಷವೇನೂ ಅಲ್ಲ. ಈ ಬಗ್ಗೆ ಚೀನಾ ಅಧಿಕಾರಿಗಳ ಜತೆ ಮಾತುಕತೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಭಾರತ ಹಾಗೂ ಚೀನಾ ಸುಮಾರು ನಾಲ್ಕು ಸಾವಿರ ಕಿಲೋಮೀಟರ್ ಗಡಿ ಹಂಚಿಕೊಂಡಿವೆ.

ಚೀನಾ ಸೇನೆ 2017ರಲ್ಲಿ 426 ಅತಿಕ್ರಮಣ ನಡೆಸಿದ್ದು, 2016ರಲ್ಲಿ 273 ಅತಿಕ್ರಮಣ ಮಾಡಿಕೊಂಡಿದೆ ಎಂದು ಅಧಿಕೃತ ಅಂಕಿ ಅಂಶಗಳು ಹೇಳುತ್ತವೆ. ಡೋಲ್ಕಂ ಪ್ರದೇಶದಲ್ಲಿ ಚೀನಾ ಅತಿಕ್ರಮಣದ ಬಗ್ಗೆ ಉಭಯ ದೇಶಗಳ ನಡುವೆ 73 ದಿನಗಳ ಸಂಘರ್ಷ ನಡೆದ ಬಳಿಕ ಇದು ಮೊದಲ ಅತಿಕ್ರಮಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News