ಭಾರೀ ಮಳೆ ಹಿನ್ನೆಲೆ: ಆ.18ರವರೆಗೆ ಕೊಚ್ಚಿ ಏರ್ ಪೋರ್ಟ್ ನಲ್ಲಿ ವಿಮಾನ ಹಾರಾಟವಿಲ್ಲ

Update: 2018-08-15 06:13 GMT

ಕೊಚ್ಚಿ, ಆ.15: ಕೇರಳದಲ್ಲಿ ತೀವ್ರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಆ.18ರ ಮಧ್ಯಾಹ್ನ 2 ಗಂಟೆಯವರೆಗೆ ವಿಮಾನ ಹಾರಾಟ ಇರುವುದಿಲ್ಲ ಎಂದು ಕೊಚ್ಚಿನ್ ಇಂಟರ್ ನ್ಯಾಶನಲ್ ಏರ್ ಪೋರ್ಟ್ ಲಿಮಿಟೆಡ್ ಘೋಷಿಸಿದೆ.

ವಿಮಾನ ನಿಲ್ದಾಣದ ಸಮೀಪವಿರುವ ಚೆಂಗಲ್ತೋಡು ಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಾದ ನಂತರ ಈ ಘೋಷಣೆಯನ್ನು ಹೊರಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News