‘ಸ್ವಚ್ಛ ಭಾರತ್’ನಿಂದ 3 ಲಕ್ಷ ಶಿಶುಗಳ ಪ್ರಾಣ ಉಳಿದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತೇ?

Update: 2018-08-15 09:58 GMT

ಹೊಸದಿಲ್ಲಿ, ಆ.15: ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಸ್ವಚ್ಛ ಭಾರತ ಮಿಷನ್ ಬಗ್ಗೆ ಉಲ್ಲೇಖಿಸಿ “3 ಲಕ್ಷ ಶಿಶುಗಳನ್ನು ರಕ್ಷಿಸುವಲ್ಲಿ ಸಫಲವಾದ ಸ್ವಚ್ಛ ಭಾರತ್ ಮಿಷನ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಮೆಚ್ಚುಗೆಯ ಮಾತುಗಳನ್ನಾಡಿದೆ ಎಂದಿದ್ದಾರೆ”. ಆದರೆ ಅವರು ವಾಸ್ತವವನ್ನು ಸ್ವಲ್ಪ ಮಟ್ಟಿಗಾದರೂ ಉತ್ಪ್ರೇಕ್ಷಿಸಿದ್ದಾರೆ.

ಕೆಲ ದಿನಗಳ ಹಿಂದೆ ಬಿಡುಗಡೆಗೊಳಿಸಲಾದ ತನ್ನ ಹೇಳಿಕೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಪ್ರಧಾನಿಯ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ ಮಿಷನ್ ಅನ್ನು ಹೊಗಳಿದ್ದು ನಿಜವಾಗಿದ್ದರೂ, ಅಕ್ಟೋಬರ್ 2019ರೊಳಗಾಗಿ ಈ ಯೋಜನೆಯನ್ನು ಶೇ.100ರಷ್ಟು ಜಾರಿಗೊಳಿಸಿದಲ್ಲಿ ಮಾತ್ರ ವಾಂತಿಬೇಧಿ ಹಾಗೂ ಅಪೌಷ್ಠಿಕಾಂಶತೆಯಿಂದಾಗಿ 3 ಲಕ್ಷ ಮಕ್ಕಳ ಸಾವುಗಳನ್ನು ತಡೆಯಬಹುದು ಎಂದು ಹೇಳಿತ್ತು.

ಆಗಸ್ಟ್ 15, 2014ರ ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಸ್ವಚ್ಛ ಭಾರತ ಮಿಷನ್ ಜಾರಿಯ ಬಗ್ಗೆ ಘೋಷಿಸಿದ್ದ ಪ್ರಧಾನಿ ಈ ಬಾರಿಯ ತಮ್ಮ ಭಾಷಣದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ವರದಿಯನ್ನು ತಮ್ಮ ಯೋಜನೆಯ ಯಶಸ್ಸಿಗೆ ಪ್ರಮಾಣಪತ್ರ ಎಂಬರ್ಥದಲ್ಲಿ ಹೇಳಿದ್ದಾರೆ. “ಸ್ವಚ್ಛ ಭಾರತ ಮಿಷನ್ ನಿಂದಾಗಿ ಮೂರು ಲಕ್ಷ ಶಿಶುಗಳ ಸಾವು ತಪ್ಪಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ” ಎಂದು ಪ್ರಧಾನಿ ಹೇಳಿಕೊಂಡಿದ್ದಾರೆ. ಆದರೆ ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದು, “ಈ ಯೋಜನೆಯನ್ನು 100 ಶೇ.ದಷ್ಟು ಜಾರಿಗೊಳಿಸಿದರೆ 3 ಲಕ್ಷ ಶಿಶುಗಳನ್ನು ಸಾವನ್ನು ತಪ್ಪಿಸಬಹುದು” ಎಂದು!.

ಕೃಪೆ: indianexpress.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News