ನಿಷ್ಮಾ ಎಕ್ಸ್ ಪೋರ್ಟ್ ಆ್ಯಂಡ್ ಇಂಪೋರ್ಟ್ ಕಂಪೆನಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Update: 2018-08-15 12:54 GMT

ತಿರುಪುರ ( ತಮಿಳುನಾಡು ), ಆ. 15 : ಇಲ್ಲಿನ ಮಂಗಳೂರು ಮೂಲದ  ನಿಷ್ಮಾ ಎಕ್ಸ್ ಪೋರ್ಟ್ ಆ್ಯಂಡ್ ಇಂಪೋರ್ಟ್ ಕಂಪೆನಿಯ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಅಸಿಸ್ಟಂಟ್ ಕಮಿಷನರ್ ಆಫ್ ಪೊಲೀಸ್ ಅಬ್ದುಲ್ ಸಲಾಂ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಧ್ವಜಾರೋಹಣ ನೆರವೇರಿಸಿದರು.

ಕ್ಯೂ ಪ್ಲಸ್ ಕಂಪೆನಿಯ ನಿರ್ದೇಶಕ ಜೋಗಿರಾಜ್ , ತಿರುಪುರ ಜುಮಾ ಮಸೀದಿಯ ಅಬ್ದುಲ್ ರಹೀಮ್  ಹಾಗು ಅಬ್ದುಲ್ ವಹಾಬ್, ಶರಣ್ ಶಿಪ್ಪಿಂಗ್ ಸಂಸ್ಥೆಯ ಅಸಿಸ್ಟಂಟ್ ಮ್ಯಾನೇಜರ್ ಸೋನಿ ಹಾಗು ಅವಿನಾಶಪ್ಪನ್, ಸಂಸ್ಥೆಯ ಮಂಗಳೂರು ಮೇಲ್ವಿಚಾರಕ ಅಶ್ರಫ್ ಅವರು ಉಪಸ್ಥಿತರಿದ್ದರು.

ಸಂಸ್ಥೆಯ ಆಡಳಿತ ನಿರ್ದೇಶಕ ಹೈದರ್ ಅಲಿ ಅವರು ಅಧ್ಯಕ್ಷತೆ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News