ಊರವರು ನೀಡಿದ್ದ ಹಣವನ್ನು ನೆರೆ ಪರಿಹಾರ ನಿಧಿಗೆ ನೀಡಿ ಮಾನವೀಯತೆ ಮೆರೆದ ಹನನ್

Update: 2018-08-17 10:27 GMT

ಕೊಚ್ಚಿ,ಆ.17: ಮಳೆಹಾನಿಯಿಂದ ನಲುಗಿರುವ ಕೇರಳೀಯರಿಗೆ ಹನನ್ ಸಹಾಯ ಹಸ್ತ ಚಾಚಿದ್ದಾರೆ. ತನಗಾಗಿ ಊರವರು ಸಂಗ್ರಹಿಸಿ ಕೊಟ್ಟ ಒಂದೂವರೆ ಲಕ್ಷ ರೂಪಾಯಿಯನ್ನು ಹನನ್ ಮುಖ್ಯಮಂತ್ರಿ ಸಂತ್ರಸ್ತ ಪರಿಹಾರನಿಧಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ. “ನೀವು ಪ್ರೀತಿಯಿಂದ ನನಗೆ ಕೊಟ್ಟ ಹಣವನ್ನು ಸಂತೋಷದೊಂದಿಗೆ ನಿಮಗೆ ಮರಳಿಸುತ್ತಿದ್ದೇನೆ” ಎಂದು ಹನನ್ ಹೇಳಿದ್ದಾರೆ.

ಮೀನು ಮಾರಿ ಶಿಕ್ಷಣ ಪಡೆಯುತ್ತಿದ್ದ ಹನನ್ ರ ಬಗ್ಗೆ ಮಾಧ್ಯಮವೊಂದು ವರದಿ ಮಾಡಿದ ನಂತರ ಅವರು ಟ್ರೋಲ್ ಗಳ ದಾಳಿಗೊಳಗಾಗಿದ್ದರು. ನಂತರ ಅವರ ವಿರುದ್ಧ ಅಪಪ್ರಚಾರ ನಡೆಸಿದ ಆರೋಪದಲ್ಲಿ ಓರ್ವನನ್ನು ಬಂಧಿಸಲಾಗಿತ್ತು.

ಜನಸಾಮಾನ್ಯರು, ರಾಜಕಾರಣಿಗಳು, ಧಾರ್ಮಿಕ ಸಂಘಟನೆಗಳು, ಸಾಮಾಜಿಕ, ಸಾಂಸ್ಕೃತಿಕ ಸಂಘಟನೆಗಳು, ಸಿನೆಮಾ ತಾರೆಯರು ಮಾತ್ರವಲ್ಲ ಅನಿವಾಸಿ ಭಾರತೀಯರು ಕೇರಳಕ್ಕೆ ದೇಣಿಗೆ ನೀಡಿದ್ದಾರೆ. ಮಳೆಯಿಂದಾಗಿ ಮನೆಯನ್ನು ತೊರೆದು ಸಂತ್ರಸ್ತರ ಶಿಬಿರಗಳಿಗೆ ಹೋದವರಿಗೆ ನೀರು, ಆಹಾರ, ಬಟ್ಟೆಗಳನ್ನು ಒದಗಿಸಲು ಇವರೆಲ್ಲ ಶ್ರಮಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News