ಆರು ಸಾವಿರ ರೈಲು ಪ್ರಯಾಣಿಕರ ಟಿಕೆಟ್ ರದ್ದು

Update: 2018-08-17 14:22 GMT

ಬೆಂಗಳೂರು, ಆ.17: ಕಳೆದ ಎರಡು ವಾರಗಳಿಂದ ಕೇರಳ, ಕರಾವಳಿ, ಕೊಡಗು ಭಾಗಗಳಲ್ಲಿ ಮುಂಗಾರು ಚುರುಕಾಗಿ ಪ್ರವಾಹ ಸೃಷ್ಟಿಸಿರುವ ಕಾರಣ ಕಳೆದ ಮೂರು ದಿನಗಳಿಂದ ಒಟ್ಟು 6 ಸಾವಿರ ಕೇರಳ ಪ್ರಯಾಣಿಕರು ತಮ್ಮ ಟಿಕೆಟ್ ರದ್ದುಗೊಳಿಸಿದ್ದಾರೆ.

ರೈಲ್ವೆ ಇಲಾಖೆಯು ಇದರಿಂದಾಗಿ ಅಪಾರವಾದ ನಷ್ಟವನ್ನು ಅನುಭವಿಸಿದ್ದು, ಸುಮಾರು 29 ಲಕ್ಷದಷ್ಟು ಹಣವನ್ನು ವಾಪಸ್ಸು ನೀಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ಈ ವಾರದಲ್ಲಿ ಎಲ್ಲ ಟಿಕೆಟ್‌ಗಳು ರದ್ದಾಗುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಗಸ್ಟ್ 14 ರಿಂದ ಇದುವರೆಗೂ ಸುಮಾರು 6,457 ಮಂದಿಯ ಟಿಕೆಟ್ ರದ್ದುಗೊಳಿಸಲಾಗಿದೆ. ಬೆಂಗಳೂರು-ಕನ್ಯಾಕುಮಾರಿ, ಯಶವಂತಪುರ-ಕೊಚುವೇಲಿ, ಯಶವಂತಪುರ-ಕೊಚುವೇಲಿ ಎಕ್ಸ್‌ಪ್ರೆಸ್, ಬೆಂಗಳೂರು-ಎರ್ನಾಕುಲಮ್ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು ಪ್ರಯಾಣಿಕರಿಗೆ 29,01,296 ಲಕ್ಷ ಹಣವನ್ನು ಹಿಂದಿರುಗಿಸಬೇಕಿದೆ ಎಂದು ನೈಋತ್ಯ ರೈಲ್ವೆಯ ಉಪ ಪ್ರಧಾನ ವ್ಯವಸ್ಥಾಪಕ ವಿಜಯ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News