ಸಮುದಾಯದ ಒಗ್ಗಟ್ಟಿಗೆ ಸಚಿವ ವೆಂಕಟರಮಣಪ್ಪ ಕರೆ

Update: 2018-08-19 19:02 GMT

ಬೆಂಗಳೂರು, ಆ. 19: ಭೋವಿ ಸಮುದಾಯದವರು ಒಗ್ಗಟ್ಟಾಗಿ ಕೆಲಸ ಮಾಡಿದರೆ ಇದರಿಂದ ಸಮುದಾಯ ಬಲಿಷ್ಠವಾಗುತ್ತದೆ. ಈ ಸಮುದಾಯದಲ್ಲಿನ ಯುವಕರು ಉನ್ನತ ಹುದ್ದೆಗಳಿಗೇರಲು ಸಾಧ್ಯ ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ಹೇಳಿದ್ದಾರೆ.

ರವಿವಾರ ಮಾದನಾಯಕನಹಳ್ಳಿಯ ಎಸ್‌ಎಸ್‌ಬಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸಮುದಾಯದ ಸಚಿವರು, ಶಾಸಕರು ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಭೋವಿ ಸಮುದಾಯದಲ್ಲಿರುವ ವಿದ್ಯಾರ್ಥಿಗಳು ಶಿಕ್ಷಣದ ಕಡೆಗೆ ಹೆಚ್ಚಿನ ಗಮನವನ್ನು ನೀಡಿ ಸರಕಾರಿ ಹುದ್ದೆಗಳನ್ನು ಪಡೆಯಬೇಕು. ಅದರ ಜೊತೆಗೆ ಉಳಿದವರಿಗೆ ಶಿಕ್ಷಣ ಪಡೆಯಲು ಪ್ರೋತ್ಸಾಹಿಸಬೇಕೆಂದು ಹೇಳಿದರು.

ಹಿರಿಯ ವಕೀಲ ಶಂಕ್ರಪ್ಪ ಮಾತನಾಡಿ, ಭೋವಿ ವಿದ್ಯಾರ್ಥಿಗಳು ಆರ್ಥಿಕವಾಗಿ, ಶೈಕ್ಷಣಿಕವಾಗಿ ಬಲಿಷ್ಠರಾದಾಗ ಮಾತ್ರ ಭೋವಿ ಸಮಾಜ ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಚಿಂತನೆ ನಡೆಸಬೇಕೆಂದು ಸಲಹೆ ನೀಡಿದರು.

ಪ್ರಕೃತಿ ವಿಕೋಪದಿಂದ ಮಡಿಕೇರಿ ಹಾಗೂ ಕೊಡಗಿನ ಜನರು ಸಂತ್ರಸ್ತರಾಗಿದ್ದು, ಅವರಿಗೆ ಕೈಲಾದ ಸಹಾಯವನ್ನು     ಾಡಿ ಎಂದು ಮನವಿ ಮಾಡಿಕೊಂಡರು. ಕಾರ್ಯಕ್ರಮದಲ್ಲಿ ಭೋವಿ ಗುರುಪೀಠದ ಪೀಠಾಧ್ಯಕ್ಷ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಬಿಬಿಎಂಪಿ ಆಯುಕ್ತ ಮಂಜುನಾಥ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News