ಬೆಂಗಳೂರು ; ದುರ್ವಾಸನೆಯಿಂದ ಬೇಸತ್ತು ಪ್ರತಿಭಟನೆ

Update: 2018-08-19 19:11 GMT

ಬೆಂಗಳೂರು, ಆ.19: ಕಸ ವಿಲೇವಾರಿ ಮಾಡದ ಕಾರಣ, ದಿನನಿತ್ಯ ದುರ್ವಾಸನೆ ಬರುತ್ತೀರುವುದರಿಂದ ಬೇಸತ್ತು ಬಿಬಿಎಂಪಿ ವಿರುದ್ಧ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.

ರವಿವಾರ ಇಲ್ಲಿನ ಸಿ.ವಿ.ರಾಮನ್ ನಗರದ ಕಗ್ಗದಾಸಪುರದ ಭುವನೇಶ್ವರ ನಗರದ ನಿವಾಸಿಗಳು ರಸ್ತೆ ಬಳಿ ಜಮಾಯಿಸಿ, ದುರ್ವಾಸನೆ ಸಮಸ್ಯೆಯನ್ನು ಶೀಘ್ರದಲ್ಲಿಯೇ ಬಗೆಹರಿಸಲು ಬಿಬಿಎಂಪಿ ಅಧಿಕಾರಿಗಳು ಮುಂದಾಗಬೇಕೆಂದು ಒತ್ತಾಯಿಸಿದರು.

ರಸ್ತೆ ಪಕ್ಕದಲ್ಲಿ ಕಸ ಹಾಕಬೇಡಿ ಎಂದು ಫಲಕಗಳನ್ನು ಹಿಡಿದ ಸಾರ್ವಜನಿಕರು, ಸಂಗ್ರಹವಾದ ಕಸ ಸರಿಯಾಗಿ ವಿಲೇವಾರಿ ಮಾಡದ ಕಾರಣದಿಂದಾಗಿ ಭುವನೇಶ್ವರ ನಗರದಲ್ಲಿ ದುರ್ವಾವನೆ ಬರುತ್ತಿದ್ದು, ಪಾದಚಾರಿ, ಸ್ಥಳಿಯ ನಿವಾಸಿಗಳಿಗೆ ತೊಂದರೆ ಮಾತ್ರವಲ್ಲದೆ, ರೋಗಗಳು ಹರಡುವ ಆತಂಕ ಎದುರಾಗಿದೆ ಎಂದರು.

ಹಲವು ದಿನಗಳಿಂದ ಬಿಬಿಎಂಪಿಯ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ, ಯಾವುದೇ ಪ್ರಯೋಜನವಾಗಿಲ್ಲ.ಹೀಗಾಗಿಯೇ, ಇಂದು ಪ್ರತಿಭಟನೆ ನಡೆಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಬಿಬಿಎಂಪಿ ಕಚೇರಿ ಮುಂದೆ ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News