ದ್ವೇಷದ ಭಾಷಣ ಮಾಡಿದ ಆದಿತ್ಯನಾಥ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಾರದೇಕೆ ?

Update: 2018-08-20 09:19 GMT

ಹೊಸದಿಲ್ಲಿ, ಆ.20: ಸಂಸದರಾಗಿದ್ದಾಗ ಗೋರಖಪುರದಲ್ಲಿ 2007ರಲ್ಲಿ ದ್ವೇಷದ ಭಾಷಣ ಮಾಡಿದ್ದ ಉತ್ತರ ಪ್ರದೇಶದ ಈಗಿನ ಮುಖ್ಯಮಂತ್ರಿ ಆದಿತ್ಯನಾಥ್ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಾರದೇಕೆ ಎಂಬ ಪ್ರಶ್ನೆಗೆ ನಾಲ್ಕು ವಾರಗಳೊಳಗೆ ಉತ್ತರಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಉತ್ತರ ಪ್ರದೇಶ ಸರಕಾರಕ್ಕೆ ಸೂಚನೆ ನೀಡಿದೆ.

ಮುಖ್ಯಮಂತ್ರಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅನುಮತಿ ನಿರಾಕರಿಸಿದ ರಾಜ್ಯ ಸರಕಾರದ ನಿರ್ಧಾರವನ್ನು ಎತ್ತಿ ಹಿಡಿದ ಅಲಹಾಬಾದ್ ಹೈಕೋರ್ಟಿನ ಆದೇಶವನ್ನು ಪ್ರಶ್ನಿಸಿ  ಸಲ್ಲ್ಲಿಸಲಾಗಿದ್ದ ಅಪೀಲೊಂದರ ಮೇಲಿನ ವಿಚಾರಣೆ ನಡೆಸಿದ ನ್ಯಾಯಾಲಯ ಸರಕಾರಕ್ಕೆ ಮೇಲಿನಂತೆ ನೋಟಿಸ್ ಜಾರಿಗೊಳಿಸಿದೆ.

ಆದಿತ್ಯನಾಥ್ ಅವರು ಗೋರಖಪುರದ ಸಂಸದರಾಗಿದ್ದಾಗ ನಗರದ ರೈಲ್ವೆ ನಿಲ್ದಾಣದ ಹೊರಗೆ ಈ ದ್ವೇಷದ ಭಾಷಣ ನೀಡಿದ್ದಾರೆನ್ನಲಾಗಿದ್ದು, ಈ ಬಗ್ಗೆ ಪೊಲೀಸ್ ದೂರು ದಾಖಲಾಗಿತ್ತು. ಆದಿತ್ಯನಾಥ್ ಭಾಷಣ ಪ್ರಚೋದನಕಾರಿಯಾಗಿತ್ತು ಹಾಗೂ ಮತೀಯ ಹಿಂಸೆ ಪ್ರೇರೇಪಿಸಿದೆ ಎಂದು ಆರೋಪಿಸಿ  ದೂರು ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News