ಮಹಿಳೆಯರ ಬಗೆಗಿನ ಭಾರತೀಯರ ದೃಷ್ಟಿಕೋನ ಬದಲಾಗಬೇಕು: ರಾಹುಲ್

Update: 2018-08-23 04:03 GMT

ಹ್ಯಾಂಬರ್ಗ್ (ಜರ್ಮನಿ), ಆ. 23: ಭಾರತೀಯ ಪುರುಷರಲ್ಲಿ ಮಹಿಳೆಯರ ಬಗೆಗಿನ ದೃಷ್ಟಿಕೋನ ಬದಲಾಗಬೇಕು. ಮಹಿಳೆಯರು ಕೂಡಾ ಸಮಾನರು ಎಂಬ ಭಾವನೆ ಬರಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ ನುಡಿದರು. ಆದರೆ ಮಹಿಳೆಯರಿಗೆ ಭಾರತ ಅತ್ಯಂತ ಅಸುರಕ್ಷಿತ ಪ್ರದೇಶ ಎಂಬ ಭಾವನೆ ಸರಿಯಲ್ಲ ಎಂದು ರಾಹುಲ್ ಪ್ರತಿಪಾದಿಸಿದರು.

ಬ್ಯುಸರೀಸ್ ಸಮ್ಮರ್ ಸ್ಕೂಲ್‌ನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, "ಮಹಿಳೆಯರ ಪಾಲಿಗೆ ಭಾರತ ಸುರಕ್ಷಿತವಲ್ಲ ಎಂಬ ವಾದವನ್ನು ನಾನು ಒಪ್ಪುವುದಿಲ್ಲ. ಆದರೆ ಭಾರತದಲ್ಲಿ ಮಹಿಳೆಯರ ವಿರುದ್ಧ ಹಿಂಸೆ ನಡೆಯುತ್ತಿರುವುದು ನಿಜ. ಬಹಳಷ್ಟು ಕಾಣಿಸುತ್ತಿದೆ. ಇನ್ನು ಬಹಳಷ್ಟು ಕಾಣಿಸುವುದಿಲ್ಲ" ಎಂದು ಸೂಚ್ಯವಾಗಿ ಹೇಳಿದರು.

"ಇದು ಎಲ್ಲ ಮನೆಗಳಲ್ಲಿ ನಡೆಯುತ್ತವೆ. ಮಹಿಳೆಯರು ಬಗ್ಗೆ ಮಾತನಾಡುವುದಿಲ್ಲ. ನನ್ನ ಪ್ರಕಾರ ಇದು ಸಾಂಸ್ಕೃತಿಕ ವಿಚಾರ. ಮಹಿಳೆಯರ ಬಗ್ಗೆ ಭಾರತೀಯ ಪುರುಷರು ಯಾವ ಭಾವನೆ ಹೊಂದಿದ್ದಾರೆ ಎನ್ನುವುದಕ್ಕೆ ಸಂಬಂಧಿಸಿದ್ದು. ಈ ಸಮಸ್ಯೆ ಬಗೆಹರಿಸಲು ದೊಡ್ಡ ಮಟ್ಟದ ಕೆಲಸ ಆಗಬೇಕು" ಎಂದು ಪ್ರತಿಪಾದಿಸಿದರು.

ಭಾರತದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ. ಹಿಂಸೆಯ ಮಟ್ಟ ಹೆಚ್ಚಿದಂತೆಲ್ಲ ದುರ್ಬಲರು ತೊಂದರೆಗೀಡಾಗುತ್ತಾರೆ. ಭಾರತದಲ್ಲಿ ಮಹಿಳೆಯರು ಈ ಪರಿಣಾಮ ಎದುರಿಸುತ್ತಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News