ಹಿಂದೂ ಮಹಾಸಭಾದ ವೆಬ್‌ಸೈಟ್ ಹ್ಯಾಕ್: ಹುರಿದ ಬೀಫ್, ಕೇರಳ ಬೀಫ್ ಕರಿ ರೆಸಿಪಿಯ ಚಿತ್ರ !

Update: 2018-08-24 14:47 GMT

ತಿರುವನಂತಪುರ, ಆ. 23: ಕೇರಳ ನೆರೆ ಸಂತ್ರಸ್ತರಲ್ಲಿ ಬೀಫ್ ತಿನ್ನದೇ ಇದ್ದವರಿಗೆ ಮಾತ್ರ ನೆರವು ನೀಡಬೇಕು ಎಂದು ಸ್ವಾಮಿ ಚಕ್ರಪಾಣಿ ಹೇಳಿಕೆ ನೀಡಿದ ಬಳಿಕ ಕೇರಳ ಮೂಲದ ಹ್ಯಾಕರ್‌ಗಳ ತಂಡ ಅಖಿಲ ಭಾರತೀಯ ಹಿಂದೂ ಮಹಾಸಭಾದ ವೆಬ್‌ಸೈಟ್ ಅನ್ನು ಹ್ಯಾಕ್ ಮಾಡಿದೆ.

ಎಬಿಬಿಎಂ ಡಾಟ್ ಆರ್ಗ್ ಇನ್ ವೆಬ್‌ಸೈಟ್ ಕೇರಳದ ಸೈಬರ್ ವಾರಿಯರ್ ತಂಡ ಹ್ಯಾಕ್ ಮಾಡಿದೆ ಎಂದು ತೋರಿಸುತ್ತಿದೆ. ಚಕ್ರಪಾಣಿ ಅವರಿಗೆ ಒಂದು ಮೆಸೇಜನ್ನು ಕೂಡ ಇದು ಹೊಂದಿದೆ. ‘‘ನಡತೆಯ ಹಿನ್ನಲೆಯಲ್ಲಿ ನಾವು ಜನರಿಗೆ ಗೌರವ ನೀಡುತ್ತೇವೆ. ಅವರ ಆಹಾರ ಅಭ್ಯಾಸದ ಹಿನ್ನೆಲೆಯಲ್ಲಿ ಅಲ್ಲ’’ ಎಂಬ ಹೇಳಿಕೆ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿದೆ.

ಕೇರಳ ನೆರೆಯ ಸಂದರ್ಭ ಚಕ್ರಪಾಣಿ ಅವರು ನೀಡಿದ ಹೇಳಿಕೆಯನ್ನು ಕೂಡ ಹ್ಯಾಕರ್‌ಗಳು ಪೋಸ್ಟ್ ಮಾಡಿದ್ದಾರೆ. ‘‘ಬೀಫ್ ತಿನ್ನುವವರನ್ನು ರಕ್ಷಿಸುವುದು ಪಾಪ. ಪ್ರಾಣಿಗಳನ್ನು ಯಾರು ಹತ್ಯೆಗೈಯುವುದಿಲ್ಲವೋ ಅವರನ್ನು ರಕ್ಷಿಸಿ’’ ಎಂದು ಚಕ್ರಪಾಣಿ ಅವರು ಹೇಳಿಕೆ ನೀಡಿದ್ದರು.

ಈ ವೆಬ್‌ಸೈಟ್‌ನಲ್ಲಿ ಹುರಿದ ಬೀಫ್‌ನ ಚಿತ್ರ ಹಾಗೂ ಕೇರಳ ಬೀಫ್ ಕರಿ ತಯಾರಿಸುವ ವಿಧಾನದ ಜಿಫ್ ಫೋಟೊವನ್ನು ಹಾಕಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News