ಗಾಂಜಾ ಮಾರಾಟ ಆರೋಪ: ಯುವಕನ ಬಂಧನ, 1 ಕೆಜಿ ಗಾಂಜಾ ಜಪ್ತಿ

Update: 2018-08-24 16:31 GMT

ಬೆಂಗಳೂರು, ಆ.24: ಮಾದಕ ವಸ್ತು ಗಾಂಜಾ ಮಾರಾಟ ಆರೋಪದಡಿ ಯುವಕನೊಬ್ಬನನ್ನು ಬಂಧಿಸಿ ಬರೋಬ್ಬರಿ 1 ಕೆಜಿ ಗಾಂಜಾ ವಶಕ್ಕೆ ಪಡೆಯುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ರಾಜೇಶ್(26) ಬಂಧಿತ ಆರೋಪಿಯಾಗಿದ್ದು, ಈತ, ಇಲ್ಲಿನ ಅಯ್ಯಪ್ಪ ಲೇಔಟ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಡುಗೋಡಿಯ ವೇಣುಗೋಪಾಲಸ್ವಾಮಿ ದೇವಸ್ಥಾನದ ಮುಂಭಾಗ ಆರೋಪಿ ಮಾದಕ ವಸ್ತು ಗಾಂಜಾ ವಶದಲ್ಲಿಟ್ಟುಕೊಂಡು ತನ್ನದೇ ಗಿರಾಕಿಗೆ ಮಾರಾಟ ಮಾಡುತ್ತಾ ಅಕ್ರಮ ಸಂಪಾದನೆ ಮಾಡುತ್ತಿರುವ ಸಂಬಂಧ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಯಿಂದ 1 ಕೆ.ಜಿ ಗಾಂಜಾ, ಮೊಬೈಲ್, ಬೈಕ್, ನಗದು ವಶಕ್ಕೆ ಪಡೆದು ಇಲ್ಲಿನ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News