ಸಿಎಂ ಆಗಿದ್ದರೂ ಮಹಿಳೆಯೆಂಬ ಕಾರಣಕ್ಕೆ ಹಲವು ಸಮಸ್ಯೆ ಎದುರಿಸಿದ್ದೇನೆ: ವಸುಂಧರಾ ರಾಜೇ

Update: 2018-08-25 08:44 GMT

 ಜೈಸಲ್ಮೇರ್, ಆ.25: ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿರುವ ಹೊರತಾಗಿಯೂ ತಾನೊಬ್ಬಳು ಮಹಿಳೆ ಎಂಬ ಮಾತ್ರಕ್ಕೆ ತನ್ನನ್ನು ಹಲವಾರು ಬಾರಿ ಟಾರ್ಗೆಟ್ ಮಾಡಲಾಗಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಸಿಂಧೆ ಹೇಳಿದ್ದಾರೆ.

ತಮ್ಮ 40 ದಿನಗಳ ಗೌರವ್ ಯಾತ್ರದ ಎರಡನೇ ಹಂತ ಆರಂಭಿಸುವ ಮುನ್ನ ಜೈಸಲ್ಮೇರ್ ನಲ್ಲಿ ಮಹಿಳೆಯರ ಶಕ್ತಿ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು ‘‘ನಾನೊಬ್ಬಳು ಸಿಎಂ ಎಂಬ ಮಾತ್ರಕ್ಕೆ ನನಗೆ ಸಮಸ್ಯೆಗಳಲ್ಲಿವೆಂದು ನಿವು ಅಂದುಕೊಂಡಿರಬಹುದು. ಆದರೆ ಈ ಹುದ್ದೆಯಲ್ಲಿಯೂ ಒಬ್ಬ ಮಹಿಳೆಯಾಗಿ ನಾನು ಕಷ್ಟ ಅನುಭವಿಸಿದ್ದೇನೆ. ಆದುದರಿಂದಲೇ ನಿಮ್ಮ ಕಷ್ಟಗಳೂ ನನಗೆ ಗೊತ್ತಾಗುತ್ತವೆ. ಇದೇ ಕಾರಣಕ್ಕೆ ಮಹಿಳೆಯರು ಯಾರ ಮುಂದೆಯೂ ಕೈಚಾಚುವುದು ಬೇಡವೆಂದು ಮಹಿಳಾ ಸಬಲೀಕರಣದ ಉದ್ದೇಶ ಹೊಂದಿದ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ’’ ಎಂದರು.

ತಮ್ಮ ಸರಕಾರ ಹೆಣ್ಣು ಮಕ್ಕಳ ಕಲ್ಯಾಣಕ್ಕೆ ಜಾರಿಗೊಳಿಸಿದ ರಾಜಶ್ರೀ ಯೋಜನೆ ಹಾಗೂ ಮಹಿಳೆಯರಿಗೆ ಆರೋಗ್ಯ ವಿಮೆಯೊದಗಿಸುವ ಭಾಮಶಾಹ್ ಯೋಜನೆಯ ಬಗ್ಗೆ ಅವರು ಮಾತನಾಡುತ್ತಾ, ತಮ್ಮ ಸರಕಾರದ ಯೋಜನೆಗಳಿಂದಾಗಿ ಗ್ರಾಮೀಣ ಪ್ರದೇಶದ ಕುಟುಂಬಗಳು ಗಂಡು ಮಗು ಹುಟ್ಟುವಾಗ ಎಷ್ಟು ಸಂತೋಷ ಪಡುತ್ತವೆಯೋ ಹೆಣ್ಣು ಮಗು ಹುಟ್ಟಿದಾಗಲೂ ಅಷ್ಟೇ ಸಂತೋಷ ಪಡುತ್ತವೆ ಎಂದರು. ‘‘ನನಗೆ ಕೇವಲ ಎರಡೇ ಜಾತಿಗಳ ಬಗ್ಗೆ ತಿಳಿದಿದೆ- ಗಂಡು ಮತ್ತು ಹೆಣ್ಣು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News