ವಾಜಪೇಯಿ ಚಿತಾಭಸ್ಮ ವಿಸರ್ಜನೆ ವೇಳೆ ಮುಳುಗಿದ ದೋಣಿ: ನದಿಗೆ ಬಿದ್ದ ಬಿಜೆಪಿ ಸಂಸದ, ಸಚಿವ, ಶಾಸಕರು

Update: 2018-08-26 08:52 GMT

ಬಸ್ತಿ, (ಉತ್ತರ ಪ್ರದೇಶ)  ಆ.26: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಚಿತಾಭಸ್ಮ ವಿಸರ್ಜನೆ ಸಂದರ್ಭ ಬಿಜೆಪಿ ಸಂಸದ, ರಾಜ್ಯ ಸಚಿವ ಹಾಗು ನಾಲ್ವರು ಶಾಸಕರು ಸೇರಿ 17 ಮಂದಿಯಿದ್ದ ಬೋಟ್ ಒಂದು ಮುಳುಗಿದ ಘಟನೆ ನಡೆದಿದೆ.

ಚಿತಾಭಸ್ಮವನ್ನು ಅಂಫಟ್ ಘಾಟ್ ಗೆ ತರಲಾಗಿದ್ದು, ಬಿಜೆಪಿ ನಾಯಕರು ಗೌರವ ಸಲ್ಲಿಸಿದ್ದರು. ಎರಡು ನಿಮಿಷಗಳ ಕಾಲ ಮೌನ ಪ್ರಾರ್ಥನೆಯನ್ನೂ ಸಲ್ಲಿಸಲಾಗಿತ್ತು. ನಂತರ ಚಿತಾಭಸ್ಮ ವಿಸರ್ಜನೆಗಾಗಿ ಬಿಜೆಪಿ ಮಾಜಿ ರಾಜ್ಯ ಮುಖ್ಯಸ್ಥ ರಾಮಪತಿ ರಾಮ್ ತ್ರಿಪಾಠಿ ನೇತೃತ್ವದಲ್ಲಿ ದೋಣಿಯಲ್ಲಿ ತೆರಳಲಾಯಿತು. ದೋಣಿಯಲ್ಲಿ ಸಚಿವ ಸುರೇಶ್ ಪಾಸಿ, ಸಂಸದ ಹರೀಶ್ ದ್ವಿವೇದಿ, ಸ್ಥಳೀಯ ಶಾಸಕರು ಮತ್ತು ಪೊಲೀಸ್ ಅಧಿಕಾರಿಯೊಬ್ಬರು ಇದ್ದರು. ದೋಣಿಗೆ ಹೆಚ್ಚಿನ ಜನರು ಹತ್ತಿದ್ದರಿಂದ ನಿಯಂತ್ರಣ ಕಳೆದುಕೊಂಡು ಅದು ಮುಳುಗಿತು.

ಕೂಡಲೇ ಪೊಲೀಸರು ಮತ್ತು ಇತರರು ನದಿಗೆ ಹಾರಿ ಎಲ್ಲರನ್ನೂ ರಕ್ಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News