ಉತ್ತರಾಧಿಕಾರಿಯನ್ನು ಶಿಫಾರಸು ಮಾಡಲು ಸಿಜೆಐಗೆ ಕಾನೂನು ಸಚಿವರ ಸೂಚನೆ

Update: 2018-08-28 16:39 GMT

ಹೊಸದಿಲ್ಲಿ,ಆ.28: ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ತನ್ನ ಉತ್ತರಾಧಿಕಾರಿಯ ಹೆಸರನ್ನು ಸೂಚಿಸುವಂತೆ ಭಾರತದ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ಅವರಿಗೆ ಸೂಚಿಸುವ ಮೂಲಕ ನೂತನ ಸಿಜೆಐ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆನ್ನಲಾಗಿದೆ.

ಮಿಶ್ರಾ ಅವರು ಈ ವರ್ಷದ ಅ.2ರಂದು ನಿವೃತ್ತರಾಗಲಿದ್ದಾರೆ.

ಕಾನೂನು ಸಚಿವಾಲಯವು ಇತ್ತೀಚಿಗೆ ಈ ಸಂಬಂಧ ಪತ್ರವೊಂದನ್ನು ನ್ಯಾ.ಮಿಶ್ರಾ ಅವರಿಗೆ ತಲುಪಿಸಿದೆ ಎಂದು ಮೂಲಗಳು ತಿಳಿಸಿವೆ.

ಸಿಜೆಐ ನೇಮಕದ ವಿಧಿವಿಧಾನಗಳಂತೆ ಸರ್ವೋಚ್ಚ ನ್ಯಾಯಾಲಯದ ಅತ್ಯಂತ ಹಿರಿಯ ಹಾಲಿ ನ್ಯಾಯಾಧೀಶರನ್ನು ಈ ಹುದ್ದೆಗೆ ನೇಮಿಸಬೇಕಾಗುತ್ತದೆ ಮತ್ತು ಕಾನೂನು ಸಚಿವರು ನಿವೃತ್ತರಾಗುತ್ತಿರುವ ಮಖ್ಯ ನ್ಯಾಯಾಧೀಶರಿಗೆ ತನ್ನ ಉತ್ತರಾಧಿಕಾರಿಯನ್ನು ಶಿಫಾರಸು ಮಾಡುವಂತೆ ಸೂಕ್ತ ಸಮಯದಲ್ಲಿ ಕೋರಬೇಕಾಗುತ್ತದೆ.

ಸಿಜೆಐ ಶಿಫಾರಸು ಕೈಸೇರಿದ ಬಳಿಕ ಕಾನೂನು ಸಚಿವರು ಅದನ್ನು ಪ್ರಧಾನಿಗೆ ಸಲ್ಲಿಸುತ್ತಾರೆ ಮತ್ತು ನೇಮಕದ ವಿಷಯದಲ್ಲಿ ಪ್ರಧಾನಿಯವರು ರಾಷ್ಟ್ರಪತಿಗಳಿಗೆ ಸಲಹೆ ನೀಡುತ್ತಾರೆ.

ಮು.ನ್ಯಾ.ಮಿಶ್ರಾ ಅವರ ಬಳಿಕ ನ್ಯಾ.ರಂಜನ್ ಗೊಗೊಯ್ ಅವರು ಸರ್ವೋಚ್ಚ ನ್ಯಾಯಾಲಯದ ಅತ್ಯಂತ ಹಿರಿಯ ನ್ಯಾಯಾಧೀಶರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News