ರಾಜ್ಯ ಲೋಕಸೇವಾ ಅಯೋಗ: ಕನ್ನಡ ಭಾಷಾ ವಿಷಯಕ್ಕೆ ಮೌಖಿಕ ಸಂದರ್ಶನ

Update: 2018-08-28 16:59 GMT

ಬೆಂಗಳೂರು, ಆ.28: ರಾಜ್ಯ ಲೋಕಸೇವಾ ಅಯೋಗವು ಮೇ/ಜೂನ್ ತಿಂಗಳಲ್ಲಿ ನಡೆಸಿದ 2018ನೆ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗಳ ಕನ್ನಡ ಭಾಷಾ ವಿಷಯದ ಮೌಖಿಕ ಸಂದರ್ಶನಕ್ಕೆ ಅರ್ಹರಾಗಿರುವ ಅಭ್ಯರ್ಥಿಗಳ ನೋಂದಣಿ ಸಂಖ್ಯೆಗಳ ಪಟ್ಟಿಯನ್ನು ಆಯೋಗದ ವೆಬ್‌ಸೈಟ್ http://kpsc.kar.nic.in ನಲ್ಲಿ ಪ್ರಕಟಿಸಿದೆ.

ಈ ಅಭ್ಯರ್ಥಿಗಳಿಗೆ ಸೆ.5ರಂದು ಬೆಂಗಳೂರು, ಕಲಬುರಗಿ, ಮೈಸೂರು, ಶಿವಮೊಗ್ಗ ಹಾಗೂ ಸೆ.5 ಮತ್ತು 6 ರಂದು ಬೆಳಗಾವಿ ವಿಭಾಗೀಯ ಕೇಂದ್ರಗಳಲ್ಲಿ ಮೌಖಿಕ ಸಂದರ್ಶನವನ್ನು ನಡೆಸಲಿದ್ದು, ಅರ್ಹ ಅಭ್ಯರ್ಥಿಗಳ ಸಂದರ್ಶನ ಸೂಚನಾ ಪತ್ರಗಳನ್ನು ಆಯೋಗದ ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಅರ್ಹ ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆಗಳನ್ನು ನಮೂದಿಸಿ ಸಂದರ್ಶನ ಸೂಚನಾ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಹಾಗೂ ಅಭ್ಯರ್ಥಿಗಳಿಗೆ ವೈಯಕ್ತಿಕವಾಗಿಯೂ ಸಂದರ್ಶನ ಸೂಚನಾ ಪತ್ರಗಳನ್ನು ಸ್ಪೀಡ್ ಪೋಸ್ಟ್ ಮುಖಾಂತರ ರವಾನಿಸಲಾಗಿದೆ.

ಸಂದರ್ಶನದ ಸಮಯದಲ್ಲಿ ಸಂದರ್ಶನ ಸೂಚನಾ ಪತ್ರದ ಜೊತೆಗೆ ಕನ್ನಡ ಭಾಷಾ ಪರೀಕ್ಷೆಯ ಲಿಖಿತ ಪರೀಕ್ಷೆಗೆ ನಿಗದಿ ಮಾಡಿದ್ದ ಪ್ರವೇಶ ಪತ್ರವನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು. ಪ್ರವೇಶ ಪತ್ರ ಹಾಗೂ ಸೂಚನಾ ಪತ್ರಗಳನ್ನು ಹಾಜರುಪಡಿಸದ ಅಭ್ಯರ್ಥಿಗಳಿಗೆ ಮೌಖಿಕ ಸಂದರ್ಶನಕ್ಕೆ ಅವಕಾಶ ನೀಡುವುದಿಲ್ಲ.

ಸೂಚನಾ ಪತ್ರಗಳು ಲಭ್ಯವಾಗದ ಮೌಖಿಕ ಸಂದರ್ಶನಕ್ಕೆ ಅರ್ಹರಾದ ಅಭ್ಯರ್ಥಿಗಳು ಸೆ.5ರ ಒಳಗಾಗಿ ಆಯೋಗದ ಕೇಂದ್ರ ಕಚೇರಿಯನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ: 080-30574944/30574945/30574957 ಅನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ಆಯೋಗದ ಪ್ರಕಟನೆೆ ತಿಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News