ಬೆಂಗಳೂರು: ಮಗುವಿನ ಮೇಲೆ ಬೀದಿನಾಯಿ ದಾಳಿ

Update: 2018-08-30 05:04 GMT

ಬೆಂಗಳೂರು, ಆ.30: ನಾಲ್ಕು ವರ್ಷದ ಮಗುವೊಂದರ ಮೇಲೆ ಬೀದಿನಾಯಿಗಳು ದಾಳಿ ನಡೆಸಿದ ಘಟನೆ ಎಚ್.ಎ.ಎಲ್. ಪೊಲೀಸ್ ಠಾಣಾ ವ್ಯಾಪ್ತಿಯ ವಿಭೂತಿಪುರದಲ್ಲಿ ಬುಧವಾರ ಸಂಜೆ ನಡೆದಿದೆ. ಗಂಭೀರ ಗಾಯಗೊಂಡಿರುವ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಭೂತಿಪುರದ ಮನೋಜ್‌ಎಂಬವರ ಪುತ್ರ ಪ್ರವೀಣ್ ನಾಯಿಗಳ ದಾಳಿಗೊಳಗಾದ ಪುಟಾಣಿ. ನಿನ್ನೆ ಸಂಜೆ ಮನೆ ಪಕ್ಕ ಆಟವಾಡುತ್ತಿದ್ದ ಪ್ರವೀಣ್‌ನ ಮೇಲೆ 10ಕ್ಕೂ ಅಧಿಕ ಬೀದಿನಾಯಿಗಳು ದಾಳಿ ನಡೆಸಿವೆ. ಇದರಿಂದ ಗಂಭೀರ ಗಾಯಗೊಂಡಿರುವ ಪ್ರವೀಣ್‌ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಎಚ್.ಎ.ಎಲ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News