ಸ್ಟಾಲಿನ್ ನಾಯಕತ್ವವನ್ನು ಒಪ್ಪಿಕೊಳ್ಳುತ್ತೇನೆ : ಅಳಗಿರಿ

Update: 2018-08-30 09:34 GMT

ಚೆನ್ನೈ, ಆ.30: ತನ್ನನ್ನು ಪಕ್ಷಕ್ಕೆ ವಾಪಸು ಸೇರಿಸಿಕೊಂಡರೆ ಕಿರಿಯ ಸಹೋದರ ಎಂಕೆ ಸ್ಟಾಲಿನ್ ನಾಯಕತ್ವವನ್ನು ಒಪ್ಪಿಕೊಳ್ಳುತ್ತೇನೆ ಎಂದು ಉಚ್ಚಾಟಿತಗೊಂಡಿರುವ ಡಿಎಂಕೆ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಎಂಕೆ ಅಳಗಿರಿ ಹೇಳಿದ್ದಾರೆ.

''ನಾವು ಡಿಎಂಕೆಗೆ ಸೇರ್ಪಡೆಯಾಗಲು ಸಿದ್ಧವಿದ್ದೇವೆ. ಅದೇ ರೀತಿ ಸ್ಟಾಲಿನ್ ನಮ್ಮ ನಾಯಕನೆಂದು ಒಪ್ಪಿಕೊಳ್ಳುತ್ತೇವೆ'' ಎಂದು 67ರ ಹರೆಯದ ಅಳಗಿರಿ ಸುದ್ದಿಗಾರರಿಗೆ ಇಂದು ತಿಳಿಸಿದ್ದಾರೆ.

ತನ್ನನ್ನು ಪಕ್ಷಕ್ಕೆ ಮರಳಿ ಸೇರ್ಪಡೆಗೊಳಿಸದೇ ಇದ್ದರೆ ಪರಿಣಾಮ ಕೆಟ್ಟದ್ದಾಗಿರುತ್ತದೆ ಎಂದು ಕಳೆದ ವಾರ ಎಚ್ಚರಿಕೆ ನೀಡಿದ್ದ ಅಳಗಿರಿ ಈಗ ರಾಜಿ ಧೋರಣೆ ತಳೆದಿದ್ದಾರೆ.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ವರಿಷ್ಠ ಕರುಣಾನಿಧಿಯವರ ಹಿರಿಯ ಪುತ್ರನಾಗಿರುವ ಅಳಗಿರಿಯವರನ್ನು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದಲ್ಲಿ 2014ರಲ್ಲಿ ಪಕ್ಷದಿಂದ ಉಚ್ಚಾಟಿಸಲಾಗಿತ್ತು. ತನ್ನ ತಮ್ಮ ಸ್ಟಾಲಿನ್‌ರನ್ನು ಡಿಎಂಕೆ ಉತ್ತರಾಧಿಕಾರಿಯಾಗಿ ಬಿಂಬಿಸುವುದರ ವಿರುದ್ಧ ಬಹಿರಂಗವಾಗಿ ಬಂಡಾಯ ಸಾರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News